Home Crime ತಲೆಮರೆಸಿಕೊಂಡಿದ್ದ ಆರೋಪಿಗೆ 3 ತಿಂಗಳ ಕಾರಾಗೃಹ ಶಿಕ್ಷೆ…!!

ತಲೆಮರೆಸಿಕೊಂಡಿದ್ದ ಆರೋಪಿಗೆ 3 ತಿಂಗಳ ಕಾರಾಗೃಹ ಶಿಕ್ಷೆ…!!

ಕಾರವಾರ: ಸಿದ್ದಾಪುರ ತಾಲುಕಿನ ವ್ಯಾಪ್ತಿಯಲ್ಲಿ 2023 ರಲ್ಲಿ ನಡೆದ ಅಪರಾಧ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಜಿಯಾವುಲ್ಲಾ ಭಾಷಾಸಾಬ್ ಎಂಬಾತನಿಗೆ ಸಿದ್ದಾಪುರ ಜೆಎಂಎಫ್ ಸಿ ನ್ಯಾಯಾಲಯ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.‌

ಜಿಯಾಉಲ್ಲಾ ಭಾಷಾಸಾಬ್ ನನ್ನು ಸಿದ್ದಾಪುರ ಪೊಲೀಸರು ಭಟ್ಕಳದಲ್ಲಿ ಬಂಧಿಸಿ ಎ.6 ರಂದು ಸಿದ್ದಾಪುರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು.

2024 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ತಲೆ ಕರೆಸಿಕೊಂಡ ಪ್ರಕರಣ ಸಹ ಈತನ ಮೇಲಿತ್ತು. ಜಿಯಾಉಲ್ಲಾ ಭಾಷಾಸಾಬ್ ಶಿಕಾರಿಪುರದ ಹಳ್ಳೂರು ಕೇರಿ ನಿವಾಸಿಯಾಗಿದ್ದಾನೆ.

ಸಿದ್ದಾಪುರ ಪೊಲೀಸರು ಈತನಿಗಾಗಿ ಒಂದು ವರ್ಷದಿಂದ ಹುಡುಕಾಟದಲ್ಲಿದ್ದರು. ಕಳೆದ ಮೂರು ತಿಂಗಳ ಹಿಂದೆ ಈತನ ಬಂಧನಕ್ಕೆ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು. ಸಿದ್ದಾಪುರ ಪಿಎಸ್ ಐ ಶಾಂತಿನಾಥ ಪಾಸನೆ ತಂಡ ಜಿಯಾಉಲ್ಲಾ ಭಾಷಾಸಾಬ್ ಗಾಗಿ ಹುಡುಕಾಟ ನಡೆಸಿತ್ತು. ಭಟ್ಕಳದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.