ಕಾಪು: ಉಡುಪಿ ಜಿಲ್ಲೆಯ ಕಾಪು ಹತ್ತಿರದ ಪಾಂಗಾಳದ ವ್ಯಕ್ತಿಯೊಬ್ಬರ ಮನೆ ಬದಿಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಪು ಪೊಲೀಸರು ಜುಗಾರಿ ಆಟಕ್ಕೆ ಬಳಸಿದ್ದ ಸೊತ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಮಹೇಶ್ ಟಿ ಎಂ, ಪಿ.ಎಸ್.ಐ, ಕಾಪು ಪೊಲೀಸ್ ಠಾಣೆ ಇವರು ದಿನಾಂಕ: 27-07-2025 ರಂದು ಠಾಣೆಯಲ್ಲಿರುವ ಸಮಯ 19.00 ಗಂಟೆಯ ಕಾಪು ತಾಲೂಕು, ಪಾಂಗಾಳ ಗ್ರಾಮದ, ಮೇಲ್ ಪಾಂಗಾಳ ಎಂಬಲ್ಲಿರುವ ರಾಜೇಶ್ ಶೆಟ್ಟಿ ಎಂಬವರ ಮನೆಯ ಬದಿಯಲ್ಲಿ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದ್ದು ಅದರಂತೆ 19.15 ಗಂಟೆಯ ಸುಮಾರಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಸುಮಾರು 7-8 ಜನ ಸೇರಿಕೊಂಡು ಅಂದರ್-ಬಾಹರ್ ಎಂಬ ಜುಗಾರಿ ಆಟ ಆಡುತ್ತಿದುದನ್ನು ಖಚಿತ ಪಡಿಸಿಕೊಂಡು ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿ ಅಂದರ್–ಬಾಹರ್ ಜುಗಾರಿ ಆಟವಾಡುತ್ತಿದ್ದವರ ಪೈಕಿ 5 ಜನರನ್ನು ವಶಕ್ಕೆ ಪಡೆದುಕೊಂಡು ಅವರುಗಳ ಹೆಸರು, ವಿಳಾಸ ವಿಚಾರಿಸಲಾಗಿ, 1) ಸುಲೇಮಾನ ಪ್ರಾಯ: 57 ವರ್ಷ, ಬಡಾಗ್ರಾಮ, ಉಚ್ಚಿಲ ಪೋಸ್ಟ್, ಕಾಪು ತಾಲೂಕು 2) ಚಂದ್ರಶೇಖರ್ ಪ್ರಾಯ: 55 ವರ್ಷ , ಅತ್ರಾಡಿ ಗ್ರಾಮ, ಹಿರಿಯಡ್ಕ ಉಡುಪಿ ತಾಲೂಕು 3) ಮಿಥುನ್,ಪ್ರಾಯ: 41 ವರ್ಷ, ಬಡಾಗ್ರಾಮ, ಉಚ್ಚಿಲ ಅಂಚೆ, ಕಾಪು ತಾಲೂಕು, 4) ಅಮಾನುಲ್ಲಾ, ಪ್ರಾಯ; 50 ವರ್ಷ, ಮಲ್ಲಾರು ಗ್ರಾಮ, ಕಾಪು ತಾಲೂಕು, 5) ಸುರೇಶ್, ಪ್ರಾಯ: 55 ವರ್ಷ, ಉಳಿಯಾರಗೊಳಿ ಗ್ರಾಮ, ಕಾಪು ತಾಲೂಕು, ಎಂಬುದಾಗಿ ತಿಳಿಸಿರುತ್ತಾರೆ ಹಾಗೂ ಜುಗಾರಿ ಆಟಕ್ಕೆ ಬಳಸಿದ 1) ವಿವಿಧ ಬಣ್ಣಗಳ ಇಸ್ಪೀಟ್ ಎಲೆಗಳು – 3 ಸೆಟ್, 2) 7,500/- ರೂ ನಗದು ಹಣ, 3) ಬೆಡ್ ಶೀಟ್ ಗಳು- 2, 4) VIVO ಕಂಪನಿಯ ಮೊಬೈಲ್ ಪೋನ್-1 ಇವುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 96/2025 ಕಲಂ: 87 ಕೆ. ಪಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.