ಮಂಗಳೂರು : ದಿನಾಂಕ 22-07-2025 ರ ಮಂಗಳವಾರ ಬೆಳಿಗ್ಗೆ 10ಗಂಟೆಯಿಂದ ಸಂಜೆ 5.30ರ ವರೆಗೆ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಷನ್ (ರಿ ) ಆಯೋಜನೆಯೊಂದಿಗೆ ಡ್ರೀಮ್ರೋನ್ ಪ್ರೊಫೆಷನಲ್ ಕೊಸ್ಮೆಟಿಕ್ಸ್ ಪ್ರಸ್ತುತ ಪಡಿಸಿರುವ ಹೇರ್ ಪರ್ಮನೆಂಟ್ ವೇವಿಂಗ್, ಬೋಟಾಕ್ಸ್ ಟ್ರೀಟ್ಮೆಂಟ್,ಹೇರ್ ಸ್ಪಾ, ಹೇರ್ ಕಟ್, ಹೇರ ಕಲರಿಂಗ್ ಬಗ್ಗೆ ಒಂದು ದಿನದ ಉಚಿತ ಸೆಮಿನಾರ್ ಅನ್ನು ಶ್ರೀನಿವಾಸ್ ಸಾಫ್ಫ್ರೋನ್ ಹೋಟೆಲ್ ಮಂಗಳೂರುನಲ್ಲಿ ನಡೆಸಲಾಯಿತು.
ಒಟ್ಟು 120 ಸದಸ್ಯರು ಇದರ ಉಪಯೋಗವನ್ನು ಪಡೆದು ಕೊಂಡರು. ಈ ಸೆಮಿನಾರ್ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಬಬಿತ ಯು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಲತ ಪೂಜಾರಿ, ಉಪಾಧ್ಯಕ್ಷರು ವಿನಾಲಿ ಕೋಟ್ಯಾನ್, ಕೋಶಾಧಿಕಾರಿ ಸವಿತ ಪಿ ಶೆಟ್ಟಿ, ಜೊತೆ ಕಾರ್ಯದರ್ಶಿ ಮೈನ ಕುಲಾಲ್, ಸದಸ್ಯರಾದ ಶಿಲ್ಪ, ಇಂದಿರ, ಉಮಾ, ಪ್ರತಿಭ, ಡ್ರೀಮ್ರೋನ್ ಪ್ರೋಫೆಷನಲ್ MD ಶ್ರೀ ಮಧು G M ಗೌಡ, ಟೆಕ್ನಿಕಲ್ ಡೈರೆಕ್ಟರ್ ಮಿಸ್ಸೆಸ್ ಶಾನ್, partner of sri matha distributors ನ ಶ್ರೀ ರತನ್ B N ಮತ್ತು ಶ್ರೀ ದಿನಕರ್, mrs ಆಯಿಷಾ, ಶ್ರೀ ಹರ್ಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯ ಎಸ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಡ್ರೀಮ್ರೋನ್ ಕಂಪೆನಿಯು ಅತೀ ಉತ್ತಮ ರೀತಿಯಲ್ಲಿ ಎಲ್ಲಾ ಸದಸ್ಯರಿಗೂ ಮನಮುಟ್ಟುವಂತೆ ಉಚಿತ ಸೆಮಿನಾರ್ ನಡೆಸಿ ಕೊಟ್ಟರು MD ಮಧು ಗೌಡ ಮತ್ತು ಮಿಸ್ಸೆಸ್ ಶಾನ್ ಇವರನ್ನು ಅಸೋಸಿಯೇಷನ್ ವತಿಯಿಂದ ಶಾಲು ಹೂ, ಹಣ್ಣು,ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಲಾಯಿತು. ಕಾರ್ಯಕ್ರಮದ ಸ್ವಾಗತ ಅಧ್ಯಕ್ಷರು ಬಬಿತ ಯು ಶೆಟ್ಟಿ ವಹಿಸಿದರು. ನಿರೂಪಣೆ ಮತ್ತು ವಂದನಾರ್ಪಣೆ ಪ್ರಧಾನ ಕಾರ್ಯದರ್ಶಿ ಸುಲತ ಪೂಜಾರಿ ನಿರ್ವಹಿಸಿದರು.


