Home Art & Culture ಲೈಟ್ ಹೌಸ್ ಚಲನಚಿತ್ರ ಬಿಡುಗಡೆ…!!

ಲೈಟ್ ಹೌಸ್ ಚಲನಚಿತ್ರ ಬಿಡುಗಡೆ…!!

ಉಡುಪಿ : ಅಸ್ತ್ರ ಪ್ರೊಡಕ್ಷನ್ ಮತ್ತು ಅಮ್ಚೆ ಕ್ರಿಯೇಶನ್’ನ ಬಹುನಿರೀಕ್ಷಿತ ಲೈಟ್ ಹೌಸ್ ಕನ್ನಡ ಚಲನಚಿತ್ರ ಬಿಡುಗಡೆ ಸಮಾರಂಭ ಕಲ್ಪನಾ ಟಾಕೀಸ್ ಆವರಣದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಹರಿಪ್ರಸಾದ್ ರೈ, ನೇತ್ರ ದಾನದ ಮಹತ್ವದ ಬಗ್ಗೆ ಇರುವ ಅಪರೂಪದ ಚಲನಚಿತ್ರ ಇದಾಗಿದೆ. ಈ ಚಲನಚಿತ್ರದಲ್ಲಿ ಅನೇಕ ಮಂದಿ ಬಾಲ ಕಲಾವಿದರು ಸೇರಿದಂತೆ ನಾಡಿನ ಖ್ಯಾತ ಕಲಾವಿದರು ನಟಿಸಿದ್ದಾರೆ. ಉಡುಪಿಯಲ್ಲಿ ಚಿತ್ರೀಕರಣಗೊಂಡ ಈ ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ಕರೆ ನೀಡಿದರು.

ನಗರಸಭಾ ಸದಸ್ಯ ವಿಜಯ ಕೊಡವೂರು, ಈ ಚಲನಚಿತ್ರವನ್ನು ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು. ಇದರಲ್ಲಿರುವ ಮನರಂಜನೆ ಮತ್ತು ಚಿತ್ರದ ತಿರುಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಿಜೆಪಿ ನಾಯಕಿಯರಾದ ವೀಣಾ ಶೆಟ್ಟಿ ಮತ್ತು ಗೀತಾಂಜಲಿ ಸುವರ್ಣ, ಉದ್ಯಮಿ ಅಮೃತ್ ಶೆಣಿ ಶುಭ ಹಾರೈಸಿದರು.

ಪತ್ರಕರ್ತ ಮತ್ತು ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಶಿರ್ವ, ಉದ್ಯಮಿ ಶ್ರೀಕಾಂತ ನಾಯಕ್, ಲೇಖಕ ರಾಘವೇಂದ್ರ ಪ್ರಭು ಕರ್ವಾಲು, ಶಿಕ್ಷಕ ಕರುಣಾಕರ ಬಂಗೇರ ಇದ್ದರು.

ಚಿತ್ರ ನಿರ್ಮಾಪಕ ದತ್ತಾತ್ರೇಯ ಪಾಟ್ಕರ್ ಬಂಟಕಲ್ಲು ಮತ್ತು ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಇತ್ತೀಚಿಗೆ ಚೆನ್ನೈಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪಡೆದ ಪ್ರಶಸ್ತಿಯನ್ನು ಅತಿಥಿಗಳಿಂದ ಪಡೆದುಕೊಂಡರು.

ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ನಿರೂಪಿಸಿ, ವಂದಿಸಿದರು. ಚಿತ್ರದ ಕಲಾವಿದರು ಭಾಗವಹಿಸಿದ್ದರು.