Home Crime ಪಡುಬಿದ್ರಿ : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಮೃತ್ಯು…!!

ಪಡುಬಿದ್ರಿ : ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಮೃತ್ಯು…!!

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ಚಂದ್ರಶೇಖರ್ ಎಂದು ತಿಳಿದು ಬಂದಿದೆ.

ಪ್ರಕರಣ ವಿವರ : ಪಿರ್ಯಾದಿದಾರರಾದ ದಿವ್ಯಾ (36),ನಡ್ಸಾಲು ಗ್ರಾಮ ಕಾಪು ಇವರ ಗಂಡ ಚಂದ್ರಶೇಖರ್‌(52) ಇವರು ದಿನಾಂಕ 17/07/2025 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ಇದ್ದು ದಿನಾಂಕ 18/07/2025 ರಂದು ರಾತ್ರಿ 9:00 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಕಲ್ಲೊಟ್ಟೆ ಬ್ರಿಡ್ಜ್‌ ಬಳಿ ಇರುವ ನೀರು ತುಂಬಿದ ಗದ್ದೆಯ ನೀರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಿರ್ಯಾದಿದಾರರ ಗಂಡ ಮನೆಯಿಂದ ಕೆಲಸಕ್ಕೆಂದು ಹೋದವರು ಇತ್ತೀಚೆಗೆ ಸುರಿದ ಮಳೆಯ ನೀರಿನಿಂದ ಗದ್ದೆಯ ಬದಿಯಲ್ಲಿ ರಸ್ತೆ ದಾಟುತ್ತಿರುವ ಸಮಯದಲ್ಲಿ ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಅರ್ ಕ್ರಮಾಂಕ‌ 19/2025 ಕಲಂ:194 BNS ರಂತೆ ಪ್ರಕರಣ ದಾಖಲಾಗಿರುತ್ತದೆ.