Home Crime ಬೈಂದೂರು: ಮೀನುಗಾರರ ಸಹಕಾರ ಸಂಘದಲ್ಲಿ ₹80.91 ಲಕ್ಷ ದುರುಪಯೋಗ : ಇಬ್ಬರ ವಿರುದ್ಧ ಪ್ರಕರಣ ದಾಖಲು..!!

ಬೈಂದೂರು: ಮೀನುಗಾರರ ಸಹಕಾರ ಸಂಘದಲ್ಲಿ ₹80.91 ಲಕ್ಷ ದುರುಪಯೋಗ : ಇಬ್ಬರ ವಿರುದ್ಧ ಪ್ರಕರಣ ದಾಖಲು..!!

ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ (ನಿ), ಉಪ್ಪುಂದದಲ್ಲಿ ಭಾರೀ ಹಣ ದುರುಪಯೋಗ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ (35) ಅವರು ನೀಡಿದ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಭಾಶ್ಚಂದ್ರ (39), ಪೂಜಾರಿ ಮನೆ, ನಾವುಂದ ಗ್ರಾಮ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದ ದೀಪಕ್ ಕುಮಾರ್ (35), ಅನುಗ್ರಹ, ಮರವಂತೆ ಗ್ರಾಮ ಇವರು ಸೇರಿಕೊಂಡು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು 2023–2024 ಸಾಲಿನಲ್ಲಿ ಒಟ್ಟು ₹80,91,996 ಮೊತ್ತದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಷಯ 2023–2024 ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಪತ್ತೆಯಾಗಿದ್ದು, ಸಂಸ್ಥೆಗೆ ಮೋಸ ಮಾಡಿ ವಂಚನೆ ನಡೆಸಿರುವುದು ಬಹಿರಂಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.