Home Crime ಉಡುಪಿ: ಕಳ್ಳತನ ಆರೋಪ ಮಾಡಿ ಹಣ ವಸೂಲಿ –  ಪ್ರಕರಣ ದಾಖಲು…!!

ಉಡುಪಿ: ಕಳ್ಳತನ ಆರೋಪ ಮಾಡಿ ಹಣ ವಸೂಲಿ –  ಪ್ರಕರಣ ದಾಖಲು…!!

ಉಡುಪಿ :ಉಡುಪಿಯ ಸಂತೆಕಟ್ಟೆಯಲ್ಲಿ ಕಳ್ಳತನ ಆರೋಪ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಉಪ್ಪೂರು ಗ್ರಾಮದ ವಿನ್ಸಿ ಡಿ ಸೋಜಾ (55) ಅವರು ಫ್ರಿಡ್ಜ್ ರಿಪೇರಿ ಕಾರ್ಯನಿರ್ವಹಿಸುತ್ತಿದ್ದು, ಸಂತೆಕಟ್ಟೆಯ ಅಪಾರ್ಟ್‌ಮೆಂಟ್‌ ಒಂದರ ನಿವಾಸಿ ಆನೆಟ್ ವೀರಾ ಮಥಾಯಸ್ ಅವರ ಮನೆಯಲ್ಲಿ ಫ್ರಿಡ್ಜ್ ರಿಪೇರಿಗೆ ತೆರಳಿದ್ದರು. ರಿಪೇರಿ ಸಾಧ್ಯವಾಗದೆ ಕಂಪನಿಯವರ ಮೂಲಕ ಸರಿಪಡಿಸಿಕೊಳ್ಳುವಂತೆ ತಿಳಿಸಿ ಹಿಂತಿರುಗಿದ್ದರು.

ಆ ನಂತರ ಆನೆಟ್ ವೀರಾ ಮಥಾಯಸ್ ಅವರು ಫೋನ್ ಮೂಲಕ ಚಿನ್ನ ಕಳ್ಳತನದ ಆರೋಪ ಮಾಡಿ ₹3.50 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದು, ಮಾನಹಾನಿ ಮಾಡುವುದಾಗಿ ಎಚ್ಚರಿಕೆ ನೀಡಿರುವುದಾಗಿ ದೂರಲಾಗಿದೆ. ಅಲ್ಲದೆ, ಕೆನರಾ ಬ್ಯಾಂಕ್ ಉಪ್ಪೂರು ಶಾಖೆಯಿಂದ ಚೆಕ್ ಮೂಲಕ ₹1 ಲಕ್ಷ ಹಣ ಪಡೆದಿರುವುದಾಗಿ ಆರೋಪಿಸಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.