Home Crime ಆನ್ ಲೈನ್ ನಲ್ಲಿ ವಂಚನೆ ಪ್ರಕರಣ : ಆರೋಪಿ ಅರೆಸ್ಟ್…!!

ಆನ್ ಲೈನ್ ನಲ್ಲಿ ವಂಚನೆ ಪ್ರಕರಣ : ಆರೋಪಿ ಅರೆಸ್ಟ್…!!

ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ವ್ಯಕ್ತಿಯೊಬ್ಬರಿಗೆ ಆನ್ ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಬೆಂಗಳೂರು ನಿವಾಸಿ ಶ್ರೀಧರ್ ವಿ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ರಮೇಶ ನಾಯ್ಕ ರವರು ಡಿಸೆಂಬರ್‌ 2024 ರಲ್ಲಿ ಮೊಬೈಲ್‌ನಲ್ಲಿ Lokal Job Application ನಲ್ಲಿ Sunshine HR Solution ಎಂಬ ಹೆಸರಿನ ಕಂಪೆನಿಯಿಂದ ನೀಡಿದ ಜಾಹಿರಾತಿನಂತೆ ಡಾಟಾ ಎಂಟ್ರಿ ಬಗ್ಗೆ ವರ್ಕ ಪ್ರಂ ಹೋಮ್‌ ಗೆ ಅರ್ಜಿ ಸಲ್ಲಿಸಿದ್ದು, ಸದ್ರಿ ಕಂಪನಿಯ ಹೆಸರಿನಲ್ಲಿ ವಿವಿಧ ಸಂಖ್ಯೆಗಳಿಂದ ಮತ್ತು ವಾಟ್ಸಪ್ ಮುಖಾಂತರ ದೂರುದಾರರನ್ನು ಸಂಪರ್ಕಿಸಿ ದಿನಾಂಕ 19/12/2024 ರಿಂದ ದಿನಾಂಕ 20/06/2025 ರವರೆಗೆ Google Pay, Phone Pay ಮುಖಾಂತರ Security Deposit, Account Creation, Error Modify ಎಂಬಿತ್ಯಾದಿಯಾಗಿ ಸಮಸ್ಯೆಯಾಗಿರುವುದಾಗಿ ನಂಬಿಸಿ ದೂರುದಾರರ ಖಾತೆಯಿಂದ ಒಟ್ಟು 98 Transaction ಮುಖಾಂತರ ಒಟ್ಟು 2,02,046-00 ರೂ ಹಣವನ್ನು ಪಾವತಿಸಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಠಾಣಾ ಅ.ಕ್ರ 42/2025 ಕಲಂ: 66(D) IT ಕಾಯ್ದೆ ಮತ್ತು 318(4) BNS ರಂತೆ ಪ್ರಕರಣ ದಾಖಲಿಸಿಕೊಂಡಿರಲಾಗಿರುತ್ತದೆ. ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷಾ ಪ್ರಿಯಂವದಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ರವರ ನೇತೃತ್ವದಲ್ಲಿ ಹೆಬ್ರಿ ಪೊಲೀಸ್ ಠಾಣಾ ಪಿ.ಎಸ್.ಐ ರವಿ ಬಿ.ಕೆ, ಸಿಬ್ಬಂದಿಯವರಾದ ಸುಜೀತ್ ಕುಮಾರ್, ಅಜೆಕಾರು ಠಾಣಾ ಸಿಬ್ಬಂದಿ ಸತೀಶ್ ಬೆಳ್ಳೆ, ಸಹಾಯಕ ಪೊಲೀಸ್ ಅಧೀಕ್ಷಕರ ಕಛೇರಿಯ ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರj ಕಚೇರಿಯ ಪ್ರಶಾಂತ್, ವಿಶ್ವನಾಥ, ನಾಗರಾಜ ಮತ್ತು ಶಶಿಕುಮಾರ್ ಒಳಗೊಂಡ ತನಿಖಾ ತಂಡವು ಬೆಂಗಳೂರಿಗೆ ತೆರಳಿ ಆಪಾದಿತನಾದ ಶ್ರೀಧರ್ ವಿ (27) ತಂದೆ: ವಿಜಯ ಕುಮಾರ್, ವಾಸ: ನಂಬ್ರ:769, 6 ನೇ ಅಡ್ಡ ರಸ್ತೆ, ದಿವಾನರ ಪಾಳ್ಯ, ಯಶವಂತಪುರ, ಬೆಂಗಳೂರು ದಿನಾಂಕ 24/07/2025ರಂದು ವಶಕ್ಕೆ ಪಡೆದು, ಆಪಾದಿತನು ಕೃತ್ಯಕ್ಕೆ ಬಳಸಿದ್ದ ಸುಮಾರು 10,000/- ಮೌಲ್ಯದ ಮೊಬೈಲ್ ಫೋನ್, 3 ವಿವಿಧ ಬ್ಯಾಂಕಿನ ಎ.ಟಿ.ಎಮ್ ಕಾರ್ಡ್ ಗಳು ನಗದು ರೂ 1,74,960/- ಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಳ್ಳಲಾಗಿದ್ದು, ಆಪಾದಿತನ ಬ್ಯಾಂಕ್ ಖಾತೆಯಲ್ಲಿದ್ದ 27,086/- ಮೊತ್ತವನ್ನು Freeze ಮಾಡಲಾಗಿರುತ್ತದೆ.

ವಿಚಾರಣಾ ಪ್ರಕ್ರಿಯೆ ಬಳಿಕ ಆಪಾದಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರುವುದಾಗಿದೆ.