ಬೈಂದೂರು : ಯು. ಬಿ .ಎಸ್ ನ ಪ್ರಧಾನ ಕಾಯ೯ದಶಿ೯ಯಾದ ಕುಮಾರಿ. ಯಶಶ್ರೀ ಬಿ ಶೆಟ್ಟಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಇಂದು ನಾವು ಸ್ವತಂತ್ರವಾಗಿ ನಮ್ಮ ಹಕ್ಕು ಮತ್ತು ಕತ೯ವ್ಯಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಗಿರುವುದು ಇಂದು ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರತಿಯೊಬ್ಬ ಭಾರತೀಯನೂ ದೇಶದ ಹಿತವನ್ನು ಬಯಸಿ, ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಸ್ವಾತಂತ್ರ್ಯ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ಮಕ್ಕಳು ತಮ್ಮ ಹೆತ್ತವರಿಗೆ, ಶಿಕ್ಷಕರಿಗೆ ಗೌರವಿಸುವುದರ ಮೂಲಕ ದೇಶದ ಅತ್ಯುತ್ತಮ ಪ್ರಜೆಯಾಗಿ ದೇಶವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯ ಬೇಕು ಎಂದು ಹೇಳಿದರು.
ಮುಖ್ಯೋಪಾಧ್ಯಾಯಿನಿಯವರಾದಶ್ರೀಮತಿ ಅಮಿತಾ ಶೆಟ್ಟಿ ಯವರು ಮಾತನಾಡಿದರು.ಇಂದು ನಮ್ಮ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವಿಜೃಮಣಿಯಾಗಿ ಆಚರಿಸಲಾಯಿತು ಮತ್ತು
ಮಕ್ಕಳು ಗಾಂಧೀಜಿ , ಸುಭಾಷ್ , ನೆಹರು , ಒನಕೆ ಓಬವ್ವ , ಭಗತ್ ಸಿಂಗ್ ,ಭಾರತಮಾತಾ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣವನ್ನು ಧರಿಸಿದ್ದರು. ಜೊತೆಗೆ ಹಲವಾರು ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಮಕ್ಕಳು ಹೆಚ್ಚು ಹಾಕಿದರು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ – ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು
ಕಾಯ೯ಕ್ರಮವನ್ನು ವಿದ್ಯಾರ್ಥಿ ಶೈನಾ ನಿರೂಪಿಸಿದರು.
ವಿದ್ಯಾರ್ಥಿ ಶ್ರೀ ವತ್ಸಾ ಸ್ವಾಗತಿಸಿದರು.
ವಿದ್ಯಾರ್ಥಿ ಕಲ್ಪನಾ ವಂದಿಸಿದರು.

