ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಅಂತೆಯೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ -2025ಕ್ಕೆ ಕೂಡ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಈ ಮೂಲಕ ಬಾಲ್ಯ ವಿವಾಹ ತಡೆಯಲು ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತೊಟ್ಟಿಲು ಮದುವೆಯಾದರೂ ಶಿಕ್ಷೆ, ಬಾಲ್ಯ ವಿವಾಹ ಕುಟುಂಬಸ್ಥರು ಒಪ್ಪಿದರೂ ಹಾಗೂ ಯಾರೇ ಒತ್ತಡ ಹಾಕಿದರೂ ಕ್ರಮವಾಗಲಿದೆ. ಈ ಮೊದಲು ವರ-ವಧುವಿನ ಕಡೆಯವರಿಗೆ ಶಿಕ್ಷೆ ಇತ್ತು. ಈಗ ಬಾಲ್ಯ ವಿವಾಹ ಮಾಡಿಸುವ ಪುರೋಹಿತರು, ಮಧ್ಯಸ್ಥಿಕೆ ವಹಿಸುವವರಿಗೆ, ಆಯೋಜಕರಿಗೆ ಕೂಡ ಶಿಕ್ಷೆಯಾಗಲಿದೆ ಎಂದು ನಿರ್ಣಯಿಸಲಾಗಿದೆ.