Home Crime ಉಡುಪಿ : ಮನೆ ಕಳ್ಳತನ ಪ್ರಕರಣ : ಆರೋಪಿ ಅರೆಸ್ಟ್…!!

ಉಡುಪಿ : ಮನೆ ಕಳ್ಳತನ ಪ್ರಕರಣ : ಆರೋಪಿ ಅರೆಸ್ಟ್…!!

ಉಡುಪಿ : ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆಯಿಂದ ಮನೆಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸುಕೇಶ್ ನಾಯ್ಕ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ : ದಿನಾಂಕ 30/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದು ಶೈಲಾ ವಿಲ್ಹೆಲ್ ಮೀನಾ (53), ರೋಸ್ ವಿಲ್ಲಾ, ಶಾರದಾಂಬ ದೇವಾಸ್ಥಾನ ಗೋಪುರ, ಒಳಕಾಡು, 76 ಬಡಗುಬೆಟ್ಟು ಗ್ರಾಮ, ಉಡುಪಿ ಇವರು ಚರ್ಚಿಗೆ ಹೋಗಲು ಚಿನ್ನ ಧರಿಸಲು ಬೆಡ್ ರೂಂ ಕಪಾಟಿನ ಸ್ಲೈಡ್ ಡೋರ್ ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 548.31 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ನ್ನು ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದು ಅಂದಾಜು ಮೌಲ್ಯ ಅಂದಾಜು ಮೌಲ್ಯ ರೂ 65,79,720 ಲಕ್ಷ ಎಂಬಿತ್ಯಾದಿಯಂತೆ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 207/2025 ಕಲಂ 331(3)331(4) 305 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಡಿಟಿ ಪ್ರಭು. ಡಿವೈಎಸ್‌ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರು (ಪ್ರಭಾರ) ಮಹೇಶ ಪ್ರಸಾದ್.ಪಿ. ನೇತೃತ್ವದಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಭರತೇಶ ಕಂಕಣವಾಡಿ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ನೇಮಿಸಿದಂತೆ ಠಾಣಾ ಸಿಬ್ಬಂದಿಯವರಾದ ಪ್ರಸನ್ನ.ಸಿ ,ಜೀವನ್‌ ಕುಮಾರ್‌, ಸಂತೋಷ್‌ ಶೆಟ್ಟಿ ,ಬಶೀರ್‌ , ಸುರೇಂದ್ರ ಡಿ , ಆನಂದ .ಎಸ್‌ , ಸಂತೋಷ್‌ ರಾಥೋಡ್‌, ಸಂತೋಷ್‌ ಗುಲ್ವಾಡಿರವರನ್ನೊಳಗೊಂಡ ಅಪರಾಧ ಪತ್ತೆ ತಂಡವು ದಿನಾಂಕ: 02.12.2025 ರಂದು ಪ್ರಕರಣದ ಆರೋಪಿಯಾದ ಸುಕೇಶ ನಾಯ್ಕ ಪ್ರಾಯ 37 ವರ್ಷ ತಂದೆ ರಾಮಚಂದ್ರ ನಾಯ್ಕ ವಾಸ ಶ್ರೀದೇವಿ ನಿಲಯ ಕುಕ್ಕಿಕಟ್ಟೆ ಕುಕ್ಕೆಹಳ್ಳಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬುವರನ್ನು ಉಡುಪಿ ನಗರದ ಕಿನಿಮೂಲ್ಕಿ ಹಿರೇನ್‌ ಬಾರ್‌ ಬಳಿ ವಶಕ್ಕೆ ಪಡೆದು ದಸ್ತಗಿರಿ ಕ್ರಮ ಜರುಗಿಸಿ ಆರೋಪಿಯು ನೀಡಿದ ವಾಗ್ಮೂಲದಂತೆ ಪ್ರಕರಣದಲ್ಲಿ ಕಳ್ಳತನವಾದ ಸೊತ್ತುಗಳನ್ನು ಅಜ್ಜರಕಾಡು ಮನೆಯೊಂದರಲ್ಲಿ ಇಟ್ಟಿರುವುದಾಗಿ ತಿಳಿಸಿದಂತೆ 548.31 ಮಿಲಿ ಗ್ರಾಂ ತೂಕದ 65,79,720 ರೂ ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿ ಆರೋಪಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿತನ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 11 ಮನೆಕಳ್ಳತನ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಉಡುಪಿ ನಗರ ಠಾಣೆಯಲ್ಲಿ 05 ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ. ಹಿರಿಯಡ್ಕ ಠಾಣೆಯಲ್ಲಿ 03 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಪ್ರಕರಣದಲ್ಲಿ ಶಿಕ್ಷೆಯಾಗಿರುತ್ತದೆ, ಬ್ರಹ್ಮಾವರ ಠಾಣೆಯಲ್ಲಿ 02 ಪ್ರಕರಣ ದಾಖಲಾಗಿರುತ್ತದೆ ಹಾಗೂ ಮಣಿಪಾಲ್‌ ಠಾಣೆಯಲ್ಲಿ 01 ಪ್ರಕರಣವು ಮಾನ್ಯ ನ್ಯಾಯಲಯದ ವಿಚಾರಣೆಯಲ್ಲಿರುತ್ತದೆ.