Home Latest ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು, ನಾಗದೇವರ ಪುನಃಪ್ರತಿಷ್ಠೆ : ಬ್ರಹ್ಮಕಲಶೋತ್ಸವ..!

ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು, ನಾಗದೇವರ ಪುನಃಪ್ರತಿಷ್ಠೆ : ಬ್ರಹ್ಮಕಲಶೋತ್ಸವ..!

ಉಡುಪಿ, ಎ.5: ಇಂದ್ರಾಳಿಯ ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪದಲ್ಲಿರುವ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿ, ಹಲವಾರು ವಿಶೇಷತೆ, ಕಾರಣಿಕತೆಯುಳ್ಳ ಶಕ್ತಿತಾಣ ಇದಾಗಿದೆ. ಇಲ್ಲಿನ ಸತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲ ಭಕ್ತರ ಇಷ್ಟಾರ್ಥವನ್ನು ಶ್ರೀ ದೇವರು ಈಡೇರಿಸಲಿ ಎಂದು ಹಾರೈಸಿದರು

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಇತಿಹಾಸ ಪ್ರಸಿದ್ಧ ಈ ಕ್ಷೇತ್ರದ ಪ್ರಾಣದೇವರು, ನಾಗ ದೇವರಿಗೆ ಸುಮಾರು 3 ಕೋ. ರೂ. ವೆಚ್ಚದಲ್ಲಿ ಗುಡಿ ನಿರ್ಮಿಸಿ ಪ್ರತಿಷ್ಠಾಪನೆ ನೆರವೇರುತ್ತಿರುವುದಕ್ಕೆ ದೇವರ ಪೂರ್ಣಾನುಗ್ರಹವೇ ಕಾರಣ, ಸಾಂಗವಾಗಿ ನೆರವೇರಿದ ಧಾರ್ಮಿಕ ಪ್ರಕ್ರಿಯೆಯಿಂದ ಸಂತೃಪ್ತಗೊಂಡ ದೇವರು ಜಗತ್ತಿಗೆ ಎದುರಾದ ಯುದ್ಧ ಭೀತಿ ಹೋಗಲಾಡಿಸಿ, ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಅನುಗ್ರಹಿಸಲಿ ಎಂದರು

ವಿದ್ವಾಂಸ ದಾಮೋದರ ಶರ್ಮ ಬಾರಕೂರು ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಜಾಜ್ ಇಂಟರ್ ನ್ಯಾಶನಲ್ ಇಂಡಿಯಾಲಿ, ಮುಂಬಯಿ ಕಾರ್ಯನಿರ್ವಾಹಕ ನಿರ್ದೇಶಕ ಜಯಕರ ಶೆಟ್ಟಿ ಬುಡ್ಡಾರ್, ಉಜ್ವಲ್ ಸಮೂಹ ಸಂಸ್ಥೆಗಳ ಪುರುಷೋತ್ತಮ ಪಿ.ಶೆಟ್ಟಿ ಸ್ವದೇಶ್ ಸಮೂಹಸಂಸ್ಥೆಗಳ ನಾಗೇಶ್ ಹೆಗ್ಡೆ, ಬೆಂಗಳೂರು ಉದ್ಯಮಿ ಇಂದ್ರಾಳಿ ಕುತಲ್ ಶೆಟ್ಟಿ ಇಂದ್ರಾಳಿಮನೆ ಜೀರ್ಸೋದ್ದಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಣಿ ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ ಶೆಟ್ಟಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಮಂಚಿ ಕೋಡಿ ಉಪಸ್ಥಿತರಿದ್ದರು.

ಶಮಿತಾ ಮೂಡುಬೆಳ್ಳಿ ನಿರೂಪಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು.