ಬಂಟ್ವಾಳ: ಅರಳ ಗ್ರಾಮದ ಗುಡ್ಡೆಯಂಗಡಿ ಸ್ನೇಹ ಭಾರತಿ ವಿದ್ಯಾಸಂಸ್ಥೆಯ ಅಧೀನ ದಲ್ಲಿರುವ ನಮ್ಮ ಹಿರಿಯರ ಮನೆ ಅನಾಥಾಶ್ರಮದಲ್ಲಿ ವಾಸ್ತವ್ಯವಿದ್ದ ಉಡುಪಿ ಜಿಲ್ಲೆಯ ಪಡು ಗ್ರಾಮದ ಲಕ್ಷ್ಮೀ ( 67) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಅನಾಥಾಶ್ರಮದ ಮೇಲ್ವಿಚಾರಕರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಳಾಸವಿದ್ದರೂ ಮೃತರ ವಾರೀಸುದಾರರು ಪತ್ತೆಯಾಗದೆ ಇರುವ ಕಾರಣಕ್ಕಾಗಿ ಮೃತದೇಹವನ್ನು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮೃತರ ವಾರೀಸುದಾರರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷರರನ್ನು ಸಂಪರ್ಕ ಮಾಡುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.




