ಉಡುಪಿ : ಉಡುಪಿ ಜಿಲ್ಲೆಯ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಮತ್ತು ಪೊಲೀಸ್ ಅಧೀಕ್ಷಕರ ಆದೇಶದಂತೆ ಮಹಮ್ಮದ್ ಫೈಜಲ್ ಎಂಬುವವರಿಗೆ ಹೊರಜಿಲ್ಲೆಗೆ ಗಡಿಪಾರು ಆದೇಶವಾಗಿದ್ದು, ಆರೋಪಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಪಡೆದ ಮಾಹಿತಿಯಂತೆ ಆದೇಶದ ಪ್ರತಿಯನ್ನು ಜಾರಿ ಮಾಡಲು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಇರುವಿಕೆಯನ್ನು ಖಚಿತಪಡಿಸಿಕೊಂಡು, ಹೋದಾಗ ಮಹಮ್ಮದ್ ಫೈಜಲ್‌ನು ತಾನು ಕುಳಿತುಕೊಂಡಿದ್ದ KA20MB7666 ನಂಬರ ಬಿಳಿ ಬಣ್ಣದ ಕಾರನ್ನು ಒಮ್ಮಲೇ ಹಿಮ್ಮುಖವಾಗಿ ಚಲಿಸಿದಾಗ ರಸ್ತೆಯ ಪಕ್ಕದಲ್ಲಿ ಇದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಓಡಿ ಹೋಗಿರುತ್ತಾನೆ, ಸದರಿ ಸಮಯ ಆತನ ಕಾರು ಜಖಂಗೊಡಿರುತ್ತದೆ. ಈ ಅಪಘಾತಕ್ಕೆ KA20MB7666ನೇ ಕಾರಿನ ಚಾಲಕ ಮಹಮ್ಮದ್ ಫೈಜಲ್ ಇವರ ಅಜಾರತೂಕತೆ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಆತನ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2026 ಕಲಂ: 281 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಮಾರ್ಚ್ 28ರಂದು ಈ ಮೇಲಿನ ಪ್ರಕರಣದಲ್ಲಿ ಸ್ಥಳ ಮಹಜರಿನ ಪ್ರಕ್ರಿಯೆ ನಡೆಸುವಾಗ ಅಪಘಾತದಲ್ಲಿ ಒಳಗೊಂಡ KA20MB7666ನೇ ಹುಂಡೈ ಕ್ರೆಟ್ಟಾ ಕಾರಿನ ಒಳಗೆ ಮಾದಕ ವಸ್ತು ಗಾಂಜಾ ಇರುವುದು ಕಂಡು ಇರುವುದು ಕಂಡುಬಂದಿರುತ್ತದೆ. ಸದ್ರಿ ಕಾರಿನಲ್ಲಿ ಒಟ್ಟು ಗಾಂಜಾ 173.42 ಗ್ರಾಮ್ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ 8000/- ಆಗಬಹುದು ಹಾಗೂ ಕಾರಿನಲ್ಲಿ ದೊರೆತ ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ 6,000/- ಮತ್ತು ನೀಲಿ ಬಣ್ಣದ ಹೋನರ್ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ 5,000/- ರೂ ಆಗಬಹುದು.
ಸದ್ರಿ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು. ಆರೋಪಿ ಮೊಹಮ್ಮದ್ ಫೈಜಲ್ ಮತ್ತು ಇನ್ನೊರ್ವ ಆರೋಪಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಕಾಯುತ್ತಿರುವುದಾಗಿರುವುದು ತಿಳಿದುಬಂದಿರುತ್ತದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 38/2026 u/s 8(a)(c), 20(b)(ii)a&b NDPS Actರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲಿನ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಹಮ್ಮದ್ ಫೈಜಲ್ ತಂದೆ: ಸುಲೇಮಾನ್ ವಾಸ: ಬಂಗ್ಲಗುಡ್ಡೆ ಕಸಬ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇತನನ್ನು ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.





