Home Karkala News ಸಚ್ಚೇರಿ ಗಾಂದಡ್ಡು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ..!!

ಸಚ್ಚೇರಿ ಗಾಂದಡ್ಡು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ..!!

filter: 0; fileterIntensity: 0.0; filterMask: 0; module: a; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (13, -1); aec_lux: 221.22385; hist255: 0.0; hist252~255: 0.0; hist0~15: 0.0;

ಕಾರ್ಕಳ : ತುಳುನಾಡು ದೈವ-ದೇವರ ನೆಲೆಬೀಡು. ದೈವಸ್ಥಾನಗಳು, ದೇವಸ್ಥಾನಗಳು ಅಭಿವೃದ್ಧಿ ಹೊಂದಿದರೆ ಊರಿಗೆ ಬರುವ ಕಷ್ಟ-ಕಾರ್ಪಣ್ಯಗಳು ದೂರವಾಗಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಹೇಳಿದರು.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಮಹಾದೇವಿ ದೇವಸ್ಥಾನದ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಅವರು ಸೋಮವಾರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಚ್ಚರಪರಾರಿ ಸುಬೋಧ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಶ್ರೀ ದೇವಿ ಪಾತ್ರಿ ಹಾಗೂ ವ್ಯವಸ್ಥಾಪಕ ಕೇಶವ ಅಂಚನ್, ರಮೇಶ್ ಶೆಟ್ಟಿ ಸಚ್ಚರಪರಾರಿ, ಪದ್ಮನಾಭ ಶೆಟ್ಟಿ ಸಚ್ಚರಪರಾರಿ, ಜಗನ್ನಾಥ ಶೆಟ್ಟಿ ಸಚ್ಚೇರಿಗುತ್ತು, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯೆ ಸುಜಾತ ಸುಬೋಧ್ ಶೆಟ್ಟಿ, ಕೃಷ್ಣ ಪೂಜಾರಿ ಬಂಡ್ರೊಟ್ಟು, ಪೊಸ್ರಾಲು ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಶ್ರೀಧರ ಸನಿಲ್, ಕೃಷ್ಣ ಪೂಜಾರಿ ಪಾಲಡ್ಕ, ದೇವಪ್ಪ ಸಫಲಿಗ, ಅರುಣ್ ರಾವ್, ಸಂತೋಷ ಕೇಶವ ಅಂಚನ್, ಕೃಷ್ಣ ಸಾಲ್ಯಾನ್ ಸಂಕಲಕರಿಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧನಸಹಾಯ ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶರತ್ ಶೆಟ್ಟಿ ಸಚ್ಚೇರಿಪೇಟೆ ಸ್ವಾಗತಿಸಿ, ಸುಧಾಕರ ಭಂಡಾರಿ ಪೊಸ್ರಾಲು ವಂದಿಸಿದರು. ಶರತ್ ಶೆಟ್ಟಿ ಸಂಕಲಕರಿಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ಕಲಾಸಂಗಮದ ಕಲಾವಿದರಿಂದ ಭಕ್ತಿ ಪ್ರಧಾನ ತುಳು ನಾಟಕ ‘ಶಿವದೂತ ಗುಳಿಗೆ’ ಪ್ರದರ್ಶನಗೊಂಡಿತು.