ಉಡುಪಿ: ಬೆಂಗಳೂರಿನಲ್ಲಿ ವಾಸವಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ನಾಪತ್ತೆಯಾದವರು ಯತಿರಾಜ (53) ಎಂದು ತಿಳಿದು ಬಂದಿದೆ.
ಮುಂಬೈಯಲ್ಲಿ ಸಂಬಂಧಿಕರೊಂದಿಗೆ ವಾಸವಿದ್ದ ಯತಿರಾಜ ತಂದೆ-ತಾಯಿ ಮೃತಪಟ್ಟ ಬಳಿಕ ಬೆಂಗಳೂರಿನಲ್ಲಿ ವಾಸಿಸುವುದಾಗಿ ಮನೆಯವರಿಗೆ ತಿಳಿಸಿದ್ದು, ಆಗಾಗ ಫೋನ್ ಕರೆ ಮಾಡಿ ಮಾತನಾಡುತಿದ್ದರು. ಆದರೆ ಇತ್ತೀಚಿನ 4-5 ತಿಂಗಳಿನಿಂದ ದೂರವಾಣಿ ಸಂಪರ್ಕಕ್ಕೆ ಅವರು ಸಿಕ್ಕಿಲ್ಲ. ಸಂಬಂಧಿಕರಲ್ಲಿ ಹಾಗೂ ಬೆಂಗಳೂರಿನಲ್ಲಿ ಗುರುತು ಪರಿಚಯದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ತಿಳಿದು ಬಂದಿದೆ.
5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಕೋಲು ಮುಖ ಹೊಂದಿರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಪಿ.ಎಸ್.ಐ ಮೊ.ನಂ: 9480805452, ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 9480805432 ಅನ್ನು ಸಂಪರ್ಕಿಸಬಹುದು ಎಂದು ಹಿರಿಯಡಕ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.





