Home Crime ಶಿವಮೊಗ್ಗ: ಬೈಕ್‌ನಲ್ಲಿ ಬರುತ್ತಿದ್ದ ದಂಪತಿ ಲಾರಿಯ ಚಕ್ರದಡಿಗೆ ಬಿದ್ದು ಸಾವು…!!

ಶಿವಮೊಗ್ಗ: ಬೈಕ್‌ನಲ್ಲಿ ಬರುತ್ತಿದ್ದ ದಂಪತಿ ಲಾರಿಯ ಚಕ್ರದಡಿಗೆ ಬಿದ್ದು ಸಾವು…!!

ಶಿವಮೊಗ್ಗ: ಬೈಕ್ ನಲ್ಲಿ ಬರುತ್ತಿದ್ದ ದಂಪತಿಗಳು ಜೋಳ ತುಂಬಿದ್ದ ‌ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್.ಕೆ.ಜಂಕ್ಷನ್ ಬಳಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ತರೀಕೆರೆ ತಾಲ್ಲೂಕಿನ ಬರಗೇನಹಳ್ಳಿ ಗೌಳಿಕ್ಯಾಂಪ್ ನ ಬಾಬು (30) ಹಾಗೂ ಆತನ ಪತ್ನಿ ಎಂದು ಗುರುತಿಸಲಾಗಿದೆ.

ಜೋಳ ತುಂಬಿದ್ದ ಲಾರಿಯು ಶಿವಮೊಗ್ಗ ತರೀಕೆರೆ ಮಾರ್ಗವಾಗಿ ಹೊರಟಿದ್ದು, ದಂಪತಿ ಸಹ ಹೋಟೆಲ್ ಕೆಲಸ ಮುಗಿಸಿಕೊಂಡು ಬರುವಾಗ ಲಾರಿ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದಾರೆ. ಬಾಬು ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪತ್ನಿ ಹೆಸರು ತಿಳಿದುಬಂದಿಲ್ಲ. ಓವರ್ ಟೇಕ್ ಭರದಲ್ಲಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ