Home Crime ಮನೆಯಿಂದ ಹೊರಹೋದ ವ್ಯಕ್ತಿ ವಾಪಸ್‌ ಬಾರದೆ ನಾಪತ್ತೆ…!!

ಮನೆಯಿಂದ ಹೊರಹೋದ ವ್ಯಕ್ತಿ ವಾಪಸ್‌ ಬಾರದೆ ನಾಪತ್ತೆ…!!

ಕಾರ್ಕಳ: ಮನೆಬಿಟ್ಟು ಹೋದ ವ್ಯಕ್ತಿಯೊಬ್ಬರು ಹಲವು ದಿನಗಳಿಂದ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರನ್ನು ಪ್ರಕಾಶ್‌(40) ಎಂದು ಗುರುತಿಸಲಾಗಿದೆ. ಅವರು ಮೂಲತಃ ಹರಿಹರ ತಾಲೂಕಿನ ಮನೆಬೆನ್ನೂರು ನಿವಾಸಿಯಾಗಿದ್ದು, ಪ್ರಸ್ತುತ ಕಾರ್ಕಳ ತಾಲೂಕು ಕಸಬಾ ಗ್ರಾಮದ ವರ್ಣಬೆಟ್ಟು ಪ್ರದೇಶದಲ್ಲಿ ಸುಧಾಕರ ಶೆಟ್ಟಿಯವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈ ಕುರಿತು ಅವರ ಪತ್ನಿ ಅಶ್ವಿನಿ(32) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಪ್ರಕಾರ, ಏಪ್ರಿಲ್‌ 30ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಪ್ರಕಾಶ್‌ ಅವರು ಮನೆಯಿಂದ ಹೊರಗೆ ಹೋಗಿದ್ದು, ಬಳಿಕ ಮನೆಗೆ ವಾಪಸ್ಸಾಗಿಲ್ಲ. ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಲಾಗಿದೆ.

ಕಾಣೆಯಾದ ವ್ಯಕ್ತಿಯ ಚಹರೆ ಹೀಗಿದೆ: ದುಂಡು ಮುಖ, ಸಾಧಾರಣ ಮೈಕಟ್ಟು, ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಟೀ-ಶರ್ಟ್‌ ಹಾಗೂ ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.