ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಅತ್ರಾಡಿಯ ಕಬ್ಯಾಡಿ ಅರ್ಮನ್ ರಟ್ ಫ್ಯಾಕ್ಟರಿ ಬಳಿ ಟೆಂಪೋ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟ ಘಟನೆ ಸಂಭವಿಸಿದೆ.
ಮತ ಭಾಸ್ಕರ್ ನಾಯಕ್ (ಎಪ್ಪತ್ತು ವರ್ಷ ) ವಯಸ್ಸಾಗಿದ್ದು ಉಡುಪಿಯ ಹೆರ್ಗ ಗ್ರಾಮದವರು ಎಂದು ತಿಳಿಯಲಾಗಿದೆ.
407 ಟೆಂಪೋ ಆತ್ರಾಡಿ ಯಿಂದ ಮೂಡುಬೆಳ್ಳೆ ಯತ್ತ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ. ಬೈಕಿನ ಹಿಂಬದಿ ಸವಾರರ ಕಾಲು ತುಂಡಾಗಿದ್ದು ಜೀವ ಅಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






