Home Crime ಕಾಪು: ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ…!!

ಕಾಪು: ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ…!!

ಕಾಪು : ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಳ್ಳಿ ಜೋಡು ರಸ್ತೆ, ಕಾರ್ಕಳ ನಿವಾಸಿ ಮಂಜುಳ (42) ಅವರು ನೀಡಿದ ಪಿರ್ಯಾದಿನ ಪ್ರಕಾರ, ಅವರ ಗಂಡ ಶ್ರೀಧರ (43) ಅವರು ಮಣಿಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಸುಮಾರು ಹತ್ತು ವರ್ಷಗಳಿಂದ ಅವರು ಹೆಂಡತಿಯೊಂದಿಗೆ ಮಾತನಾಡದೇ ಪ್ರತ್ಯೇಕವಾಗಿ ವಾಸವಾಗಿದ್ದು, ವಿಪರೀತ ಮದ್ಯಪಾನದ ಚಟ ಹೊಂದಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಕಳೆದ ಎರಡು-ಅರ್ಧ ತಿಂಗಳಿನಿಂದ ಶ್ರೀಧರ ಅವರು ಮಣಿಪುರ ಗ್ರಾಮದ ಬೋರ್ಗಲ್ ಗುಡ್ಡೆಯಲ್ಲಿರುವ ಅಪ್ಪು ಶೆಟ್ಟಿಯವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 28-03-2026 ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆನಂದ ಎಸ್. ಪೂಜಾರಿ ಅವರು ಮಂಜುಳ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಶ್ರೀಧರ ಅವರು ಅಪ್ಪು ಶೆಟ್ಟಿಯವರ ತೋಟದ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ತಿಳಿದು ಮಂಜುಳ ಅವರು ತಮ್ಮ ಮಗ ರೋಹಿತ್ ಹಾಗೂ ಅಣ್ಣ ನಾಗೇಶ್ ಅವರೊಂದಿಗೆ ತೋಟದ ಮನೆಗೆ ತೆರಳಿ ನೋಡಿದಾಗ, ಶ್ರೀಧರ ಅವರು ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.