Home Crime ಕೋಳಿ ಅಂಕ ಜುಗಾರಿ ಮೇಲೆ ದಾಳಿ : ಇಬ್ಬರು ವಶ…!!

ಕೋಳಿ ಅಂಕ ಜುಗಾರಿ ಮೇಲೆ ದಾಳಿ : ಇಬ್ಬರು ವಶ…!!

ಹೆಬ್ರಿ: ನಾಲ್ಕೂರು ಗ್ರಾಮದ ಚಂದಾಲ್‌ ಕಟ್ಟೆ ಗೇರು ಪ್ಲಾಂಟೇಷನ್‌ನಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಮೇಲೆ ಹೆಬ್ರಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಮೇ 20ರಂದು ರಾತ್ರಿ ನಡೆದಿದೆ.

ಪೊಲೀಸ್ ಮಾಹಿತಿಯಂತೆ, ಪಿಎಸ್‌ಐ ರವಿ ಬಿ.ಕೆ. ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ನಾಲ್ಕೂರು ಬೀಟ್ ಸಿಬ್ಬಂದಿಯಿಂದ ಮಾಹಿತಿ ಲಭಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜುಗಾರಿ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಾತ್ರಿ ಸುಮಾರು 8.30ಕ್ಕೆ ದಾಳಿ ನಡೆಸಲಾಗಿದೆ.

ದಾಳಿ ವೇಳೆ ಸ್ಥಳದಲ್ಲಿದ್ದ ಶೇಖರ ಪೂಜಾರಿ ಹಾಗೂ ಬಸವ ಕುಲಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇತರ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಜೂಜಾಟಕ್ಕೆ ಬಳಸಲಾಗಿದ್ದ ಅಂದಾಜು ₹2,800 ಮೌಲ್ಯದ ನಾಲ್ಕು ಕೋಳಿ ಹುಂಜಗಳು, ಮೂರು ಕೋಳಿ ಬಾಳುಗಳು, ನಾಲ್ಕು ಕೈಚೀಲಗಳು, ₹1,000 ನಗದು ಹಾಗೂ ಒಂದು ಟಾರ್ಚ್ ಅನ್ನು ಪೊಲೀಸರು ಮಹಜರು ಮುಖೇನ ವಶಪಡಿಸಿಕೊಂಡಿದ್ದಾರೆ.

ಹಣವನ್ನು ಪಣವಾಗಿಟ್ಟು, ಕೋಳಿಗಳಿಗೆ ಆಹಾರ ಮತ್ತು ನೀರು ನೀಡದೆ ಹಿಂಸಾತ್ಮಕ ರೀತಿಯಲ್ಲಿ ಕೋಳಿ ಅಂಕ ಜುಗಾರಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.