ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕದ ಪೆರ್ಡೂರಿನ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ನಡೆದಿದೆ.
ವಂಚನೆಗೊಳಗಾದ ಮಹಿಳೆ ಶ್ವೇತಾ ಡಿ ಎಂದು ತಿಳಿಯಲಾಗಿದೆ.
ಪ್ರಕರಣದ ವಿವರ : ಫಿರ್ಯಾದಿ ಶ್ವೇತಾ ಡಿ (26) ಪೆರ್ಡೂರು ಗ್ರಾಮ, ಉಡುಪಿ ಇವರು ದಿನಾಂಕ:06/07/2025 ರಂದು ಪಿರ್ಯಾದಿದಾರರ ಮೊಬೈಲ್ ಗೆ instagram ಹಾಗೂ telegram ಮುಖೇನ ಒಂದು ಲಿಂಕ್ ಬಂದಿದ್ದು ಅದಕ್ಕೆ ಲೈಕ್ ಮಾಡುವಂತೆ ತಿಳಿಸಿದ್ದು, ಆಗ ಪಿರ್ಯಾದಿ ಲೈಕ್ ಮಾಡಿರುತ್ತಾರೆ. ನಂತರ ಟಾಸ್ಕ್‌ನ್ನು ಮಾಡಿದ್ದಲ್ಲಿ ಹೆಚ್ಚು ಹಣ ಬರುವುದಾಗಿ ನಂಬಿಸಿ ಹಣ ಹಾಕುವಂತೆ ತಿಳಿಸಿದಾಗ ಪಿರ್ಯಾದಿದಾರರು ಪೋನ್ ಪೇ ಮುಖೇನ ಹಂತ ಹಂತವಾಗಿ ರೂ 1,64,800/- ಹಾಗೂ ದಿನಾಂಕ:09/07/2025 ರಂದು ಚೆಕ್ ಮುಖೇನ ಸಿಟಿ ಯುನಿಯನ್‌ಬ್ಯಾಂಕ್ ಡೆಲ್ಲಿ ಇದರ ಖಾತೆ ನಂಬ್ರ 500101013968030 ನೇದಕ್ಕೆ ರೂ 1,96,000/- ರೂಪಾಯಿಯನ್ನು ಹಾಕಿರುತ್ತಾರೆ. ಪಿರ್ಯಾದಿದಾರರು ದಿನಾಂಕ:06/07/2025 ರಿಂದ ದಿನಾಂಕ: 09/07/2025 ರವರೆಗೆ ಒಟ್ಟು ರೂಪಾಯಿ 3,60,800/- ಹಣವನ್ನು ಅಪರಿಚಿತ ಸೈಬರ್ ವಂಚಕರ ವಿವಿಧ ಖಾತೆಗಳಿಗೆ ಹಾಕಿರುತ್ತಾರೆ. ಯಾರೋ ಆನ್‌ಲೈನ್ ವಂಚಕರು ಪಿರ್ಯಾದಿದಾರರನ್ನು ನಂಬಿಸಿ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುತ್ತಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 50/2025 ಕಲಂ: 66(D)IT ACT ನಂತೆ ಪ್ರಕರಣ ದಾಖಲಾಗಿರುತ್ತದೆ.