ಉಡುಪಿ : ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿ ಮಲ್ಪೆ ಇಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಸಂತೋಷ್ ಶೆಟ್ಟಿ ಸಾಲಿಕೇರಿ ಇವರಿಗೆ 2025 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ ಲಭಿಸಿದೆ.
ಡಾ. ಸಂತೋಷ್ ಶೆಟ್ಟಿರವರು ಮೂಲತ ಬ್ರಹ್ಮಾವರದ ಸಾಲಿಕೇರಿ ದಿ. ರಾಜೀವಿ ಶಕ್ತಿಯವರ ಸುಪುತ್ರ, 2000 ನೇ ಇಸವಿಗೆ ಪೊಲೀಸ್ ಇಲಾಖೆಗೆ ಸೇರಿರುವ ಇವರು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕರಾವಳಿ ಕಾವಲು ಪೊಲೀಸ್ ಮಲ್ಲೆ ಇದರ ಕೇಂದ್ರಕಚೇರಿಯ ವಾಹನ ವಿಭಾಗದಲ್ಲಿ ಬರಹಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು 2022 ನೇ ವರ್ಷದಲ್ಲಿ ಪಿ.ಹೆಚ್ಡಿ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಕೂಡ ಪಡೆದಿರುತ್ತಾರೆ. ಕರಾವಳಿ ಕಾವಲು ಪೊಲೀಸ್ ಘಟಕದಲ್ಲಿ ಇವರು ಮಾಡಿದ ಹಸಿರು ಕ್ರಾಂತಿಗೆ ಮತ್ತು ಪ್ರಾಣಿಪಕ್ಷಿಗಳ ಸಾಕಾಣಿಕೆಗೆ ದಿ. ಮಧುಕರ ಶೆಟ್ಟಿ ಐಪಿಎಸ್ ಗೌರವ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರವನ್ನು ಪಡೆದು ಇಲಾಖೆಗೆ ಹೆಮ್ಮೆಯನ್ನು ತಂದಿರುತ್ತಾರೆ.
ಸ್ಥಳಿಯ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಮಾಧ್ಯಮದಲ್ಲೂ ಕೂಡ ಈ ಬಗ್ಗೆ ವರದಿ ಬಂದಿರುವುದು ಮಾತ್ರವಲ್ಲದೆ ಇಲಾಖೆಯ ಹಿರಿಯ ಅಧಿಕಾಲಯವರಿಂದ, ಉಡುಪಿ-ಚಿಕ್ಕಮಗಳೂರು ಸಂಸದರು, ಉಡುಪಿ ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳಿಂದ ಹಲವು ಭಾರಿ ಪ್ರಶಂಸನೆಯನ್ನು ಪಡೆದಿರುತ್ತಾರೆ.





