Home Crime ಉಡುಪಿ: ನಿರ್ಮಾಣ ಹಂತದ ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು…!!

ಉಡುಪಿ: ನಿರ್ಮಾಣ ಹಂತದ ಮನೆಯ ದಾರಂದ ಬಿದ್ದು ಕಾರ್ಮಿಕ ಮೃತ್ಯು…!!

ಉಡುಪಿ : ನಿರ್ಮಾಣ ಹಂತದಲ್ಲಿದ್ದ ಮನೆಯ ಮರದ ದಾರಂದ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿ ಫೆ.6ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಬಸಪ್ಪ ಮಾದರ(38) ಎಂದು ಗುರುತಿಸಲಾಗಿದೆ. ಇವರು ನಂದಗೋಕುಲದ ರಾಘವೇಂದ್ರ ತಂತ್ರಿ ಎಂಬವರ ಹೊಸಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮೇಸ್ತ್ರಿ ಜೊತೆ ಮನೆಯ ಮುಖ್ಯದ್ವಾರದ ಮರದ ದಾರಂದವನ್ನು ನಿಲ್ಲಿಸಿದ್ದರು.

ಬಳಿಕ ಊಟ ಮಾಡಿ ಬಂದ ಬಸಪ್ಪ ದಾರಂದ ನಿಲ್ಲಿಸಿದ ಸೀಟ್‌ಔಟ್‌ನಲ್ಲಿ ಮಲಗಿದ್ದರು. ಈ ವೇಳೆ ದಾರಂದ ಆಕಸ್ಮಿಕ ವಾಗಿ ಬಸಪ್ಪ ಮಾದರ ಅವರ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ