Home Crime ಕಪಿಲ್‌ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ…!!

ಕಪಿಲ್‌ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ…!!

ಕೆನಡಾ: ಭಾರತದ ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಕೆಫೆಯ ಮೇಲೆ ಗುಂಡಿನ ದಾಳಿ ನಡೆದ ಸುದ್ದಿ ಎಲ್ಲರನ್ನೂ ಆಘಾತಗೊಳಿಸಿದೆ. ಗುರುವಾರ ಬೆಳಗಿನ ಜಾವ 1:50 ಕ್ಕೆ ಹೊಸದಾಗಿ ತೆರೆಯಲಾದ ಕ್ಯಾಪ್ಸ್ ಕೆಫೆಯ ಮೇಲೆ ಅಪರಿಚಿತ ದಾಳಿಕೋರರು ಮನಬಂದಂತೆ ಗುಂಡು ಹಾರಿಸಲಾಗಿದೆ.

ಸ್ಥಳದಲ್ಲಿದ್ದ ಹಿರಿಯ ಪತ್ರಕರ್ತ ಸಮೀರ್ ಕೌಶಲ್, ಅಮರ್ ಉಜಲಾ ಡಿಜಿಟಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಘಟನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಕೆಫೆ ಕಟ್ಟಡಕ್ಕೆ ಹಾನಿಯಾಗಿದೆ. ಗೋಡೆಗಳಲ್ಲಿ ರಂಧ್ರಗಳುಂಟಾಗಿದೆ ಮತ್ತು ಗಾಜುಗಳು ಒಡೆದಿದೆ.

ಈ ಘಟನೆಯ ವೀಡಿಯೊ ಕೂಡ ಹೊರಬಂದಿದ್ದು, ದಾಳಿಕೋರ ಕಾರಿನಿಂದ ಪಿಸ್ತೂಲ್ ಹೊರತೆಗೆದು ಗುಂಡು ಹಾರಿಸುತ್ತಿರುವುದು ಕಂಡು ಬಂದಿದೆ. ಸಮೀರ್ ಕೌಶಲ್ ಅವರ ಪ್ರಕಾರ, ಈ ಪ್ರದೇಶವು ಸಂಪೂರ್ಣವಾಗಿ ಜನವಸತಿ ಪ್ರದೇಶವಾಗಿದೆ. ಕೆಫೆಯ ಮುಂಭಾಗದಲ್ಲಿಯೇ ಒಂದು ಡೇ ಕೇರ್ ಸೆಂಟರ್ ಇದ್ದು, ಅಲ್ಲಿ ಚಿಕ್ಕ ಮಕ್ಕಳು ಹಗಲಿನ ವೇಳೆಯಲ್ಲಿ ತಂಗುತ್ತಾರೆ. ಹತ್ತಿರದಲ್ಲಿ ಅಂಗಡಿಗಳು ಮತ್ತು ಊಟದ ಸ್ಥಳಗಳಿವೆ.

“ಘಟನೆಯ ಸಮಯದಲ್ಲಿ ಕೆಫೆ ಸಿಬ್ಬಂದಿ ಒಳಗೆ ಇದ್ದಿದ್ದು, ಘಟನೆ ನಡೆದಾಗ ಭಯಭೀತರಾಗಿದ್ದರು. ಆದರೆ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸ್ಥಳೀಯ ಜನರು ಇನ್ನೂ ಆಘಾತದಲ್ಲಿದ್ದಾರೆ ಮತ್ತು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ, ಸ್ಥಳಕ್ಕೆ ತಲುಪಿ ಪ್ರದೇಶವನ್ನು ಸುತ್ತುವರೆದಿದ್ದು, ತನಿಖೆ ಪ್ರಾರಂಭ ಮಾಡಿದೆ ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ಹರ್ಜೀತ್ ಸಿಂಗ್ ಅಲಿಯಾಸ್ ಲಾಡಿ ಹೆಸರು ಕೇಳಿಬಂದಿದೆ. ಈತ ಪಂಜಾಬ್‌ನ ನವನ್‌ಶಹರ್ ಜಿಲ್ಲೆಯ ಗಾರ್ಪಧಾನ ಗ್ರಾಮದ ನಿವಾಸಿ. ಲಾಡಿಯ ತಂದೆಯ ಹೆಸರು ಕುಲದೀಪ್ ಸಿಂಗ್. ಎನ್‌ಐಎ 10 ಲಕ್ಷ ರೂ. ಬಹುಮಾನ ಘೋಷಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕಾರ, ಲಾಡಿ ಖಲಿಸ್ತಾನ್ ಪರ ಘಟಕದ ಸಕ್ರಿಯ ಸದಸ್ಯ. ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ನಂತಹ ಸಂಘಟನೆಗಳ ವಿದೇಶಿ ಮುಖ್ಯಸ್ಥರೊಂದಿಗೆ ಅವರು ಸಂಪರ್ಕ ಹೊಂದಿದ್ದಾನೆ. ಹರ್ಜೀತ್ ಸಿಂಗ್ ಅಲಿಯಾಸ್ ಲಾಡಿಯನ್ನು ಪರಾರಿಯಾಗಿರುವ ಭಯೋತ್ಪಾದಕ ಎಂದು NIA ಘೋಷಿಸಿದ್ದು, ಆತನ ಮೇಲೆ 10 ಲಕ್ಷ ರೂ. ಬಹುಮಾನವಿದೆ.

ಭಾರತದಲ್ಲಿ ನಡೆದ ವಿಎಚ್‌ಪಿ ನಾಯಕ ವಿಕಾಸ್ ಬಗ್ಗಾ ಹತ್ಯೆಯಲ್ಲೂ ಲಾಡಿಯ ಹೆಸರು ಇದೆ. ಜೂನ್ 2024 ರಲ್ಲಿ, ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಇದರಲ್ಲಿ ಹರ್ಜೀತ್ ಲಾಡಿ, ಕುಲ್ಬೀರ್ ಸಿಂಗ್ ಅಲಿಯಾಸ್ ಸಿಧು ಮತ್ತು ಇತರ ಅನೇಕರು ಅದರ ಸಂಚುಕೋರರು ಎಂದು ತಿಳಿದುಬಂದಿದೆ.