Home Crime ಮಲ್ಪೆ : ಕುತ್ತಿಗೆಗೆ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ…!!

ಮಲ್ಪೆ : ಕುತ್ತಿಗೆಗೆ ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೊಡವೂರು‌ ಎಂಬಲ್ಲಿ ಯುವಕನೊಬ್ಬ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಲಿಪು ಬೇಹರಾ ಎಂದು ತಿಳಿಯಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಜೈರಾಮ್‌ ಭುಯಾನ್ (24), ಓಡಿಸ್ಸಾ ರಾಜ್ಯ ,ಹಾಲಿ ವಾಸ:ಕೊಡವೂರು ಗ್ರಾಮ, ಉಡುಪಿ ಇವರು ಪಾಸ್ಟ್‌ ಪುಡ್‌ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಊರಿನ ಲಿಪು ಬೇಹರಾ (24) ಹಾಗೂ ಬಾದಲ್‌ ಮಲ್ಲಿಕ್‌ ಮತ್ತು ಸಾನು ಹಾಗೂ ಕಾಳು ಎಂಬುವವರ ಜೊತೆ ವಾಸವಾಗಿರುತ್ತಾರೆ. ಪಿರ್ಯಾದಿದಾರರಿಗೆ ಹುಷಾರಿಲ್ಲದೆ ಮನೆಯಲ್ಲಿದ್ದು, ದಿನಾಂಕ 08/07/2025 ರಂದು ಸಂಜೆ 4:30 ಗಂಟೆಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಮಲ್ಪೆ ನರ್ಸಿಂಗ್‌ ಹೋಮ್‌ ಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಮನೆಗೆ ವಾಪಸ್ಸು ಬಂದು ನೋಡಿದಾಗ. ಲಿಪು ಬೇಹರಾ ರವರು ಮನೆಯ ರೂಮ್‌ ನ ಒಳಗೆ ಇದ್ದನು. ಸಂಜೆ 06:30 ಗಂಟೆಗೆ ಲಿಪು ಬೇಹರಾ ರವರು ಮಧ್ಯಾಹ್ನ ಊಟ ಮಾಡಿರಲಿಲ್ಲ. ಆದ್ದರಿಂದ ತಿನ್ನಲು ಎನಾದರೂ ಬೇಕಾ ಎಂದು ರೂಮ್‌ ನ ಬಾಗಿಲು ಬಡೆದಿದ್ದು. ಲಿಪು ಬೇಹರಾ ರವರು ಎನು ಮಾತನಾಡದೇ ಇದ್ದನು. ಆಗ ದಿನೇಶ ಎಂಬುವವರಿಗೆ ಪೋನ್‌ ಮಾಡಿ ವಿಚಾರ ತಿಳಿಸಿ ಮಲ್ಪೆ ಪೊಲೀಸ್‌ ರವರೊಂದಿಗೆ ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ ಲಿಪು ಬೇಹರಾ ರವರು ಕಾಟ್‌ ಮೇಲೆ ಕುಳಿತುಕೊಂಡ ಸ್ಥಿತಿಯಲ್ಲಿ ಗೋಡೆಯಲ್ಲಿರುವ ಕಿಟಕಿಗೆ ಟ್ರ್ಯಾಕ್‌ ಪ್ಯಾಂಟನ್‌ ಕಸಿಯನ್ನು ಕಟ್ಟಿ ಕುತ್ತಿಗೆಗ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿರುತ್ತಾನೆ. ಲಿಪು ಬೇಹರಾ ರವರು ಮಾನಸಿಕವಾಗಿ ನೊಂದು ಅಥವಾ ಇನ್ನಾವೂದೋ ಕಾರಣದಿಂದ ದಿನಾಂಕ 08/07/2025 ರಂದು 4:30 ಗಂಟೆಯಿಂದ 6:30 ಗಂಟೆಯ ಮಧ್ಯಾವದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 38/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.