ಶಿರ್ವಾ: ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪ ಮಹಿಳೆಯೊಬ್ಬರ ಜಾಗದಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳತನ ನಡೆಸಿದ ಘಟನೆ ಸಂಭವಿಸಿದೆ.
ಕಾಪು ನಿವಾಸಿ ಗುಲಾಬಿ ಎಂಬವರ ಜಾಗದಲ್ಲಿ ಶ್ರೀಗಂಧದ ಮರ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಪಿರ್ಯಾದಿದಾರರಾದ ಸತೀಶ , ಮೂಡುಬೆಳ್ಳೆ ಗ್ರಾಮ, ಕಾಪು ಇವರ ತಾಯಿ ಗುಲಾಬಿ ಇವರ ಹೆಸರಿನಲ್ಲಿ ಜಾಗವಿದ್ದು ಈ ಜಾಗದಲ್ಲಿ ಶ್ರೀಗಂಧದ ಮರವನ್ನು ನೆಟ್ಟಿ ಬೆಳೆಸಿರುತ್ತಾರೆ. ಈ ಮರಗಳಿಗೆ 40 ವರ್ಷ ಆಗಿರುತ್ತದೆ. ಒಂದು ಮರವು ಸುಮಾರು ಏಳು ಅಡಿ ಉದ್ದ ಆರು ಇಂಚು ದಪ್ಪ ಇರುತ್ತದೆ. ಈ ಮರದ ಪಕ್ಕದಲ್ಲಿ ಇನ್ನೊಂದು ಮರ ಇದ್ದು ಅದರ ಉದ್ದ ಆರೂವರೆ ಅಡಿ ಮತ್ತು ಐದು ಇಂಚು ದಪ್ಪ ಇರುತ್ತದೆ. ಈ ಎರಡು ಮರಗಳ ಅಂದಾಜು ಮೌಲ್ಯ ಎರಡು ಲಕ್ಷ ಆಗಬಹುದು. ಪಿರ್ಯಾದಿದಾರರು ದಿನಾಂಕ 29/05/2025 ರಂದು ಬೆಳಿಗ್ಗೆ 9:30 ನೋಡಿದಾಗ ಈ ಎರಡು ಮರಗಳನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಒಂದು ಮರವನ್ನು ಬುಡದಿಂದ ಕತ್ತರಿಸಿ ಇನ್ನೊಂದು ಮರವನ್ನು ಬುಡ ಸಮೇತವಾಗಿ ಅಗೆದುಕೊಂಡು ಹೋಗಿರುತ್ತಾರೆ.
ಒಂದು ಮರದ ಬುಡ ಮತ್ತು ಮರದ ಗೆಲ್ಲುಗಳು ಸ್ಥಳದಲ್ಲಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2025 ಕಲಂ: 303(2) BNS ಮತ್ತುಕಲಂ: 86 ಕರ್ನಾಟಕ ಅರಣ್ಯ ಆಧಿನಿಯಮ ದಂತೆ ಪ್ರಕರಣ ದಾಖಲಾಗಿರುತ್ತದೆ.