Home Crime ವ್ಯಕ್ತಿಯೊಬ್ಬರಿಗೆ ಟ್ರೇಡಿಂಗ್ ಗ್ರೂಪ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ…!!

ವ್ಯಕ್ತಿಯೊಬ್ಬರಿಗೆ ಟ್ರೇಡಿಂಗ್ ಗ್ರೂಪ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ…!!

ಉಡುಪಿ: ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಮ್ ಸೋಷಿಯಲ್‌ ಮೀಡಿಯಾದಲ್ಲಿ ಅಪರಿಚಿತರು ಪರಿಚಯವಾಗಿ ಟ್ರೇಡಿಂಗ್ ಗ್ರೂಪ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಗೊಳಾಗದವರು ಅರುಣ್ ರಾಜ್ ಎಂದು ತಿಳಿದು ಬಂದಿದೆ.

ಉಡುಪಿ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಸಾರಾಂಶ : ಪಿರ್ಯಾದಿದಾರರಾದ ಅರುಣ್‌ ರಾಜ್‌ ಇವರಿಗೆ ದಿನಾಂಕ 13/06/2025 ರಂದ ಟೆಲಿಗ್ರಾಮ್‌ ಸೋಷಿಯಲ್‌ ಮೀಡಿಯಾದಲ್ಲಿ ಯಾರೋ ಅಪರಿಚತರು ಪಿರ್ಯಾದಿದಾರರನ್ನು Chearles Schwab 20 gold foreign exchange trading group ಎಂಬ ಗುಂಪಿಗೆ ಸೇರಿಸಿದ್ದು, ಅ ಗುಂಪಿನ ಸದಸ್ಯರು ಪಿರ್ಯಾದಿದಾರರಿಗೆ ಬೇರೆ ಬೇರೆ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲು ಪ್ರಚೋದಿಸಿದ್ದು, ಅದರಂತೆ ಪಿರ್ಯಾದಿದಾರರು ಒಟ್ಟು 5,42,500/- ರೂಪಾಯಿ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ವರ್ಗಾವಣೆ ಮಾಡಿರುತ್ತಾರೆ. ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಪ್ರಯತ್ನಿಸಿದಾಗ ಪುನಃ ಪುನಃ ಹಣ ಹಾಕುವಂತೆ ಒತ್ತಾಯ ಮಾಡಿದ್ದು, ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಲೀ ಲಾಭಾಂಶವನ್ನಾಗಲೀ ವಾಪಾಸು ನೀಡದೇ ಮೋಸದಿಂದ ನಷ್ಟ ಉಂಟು ಮಾಡಿರುತ್ತಾರೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2025 ಕಲಂ: 66(ಸಿ), 66(ಡಿ) IT ಆಕ್ಟ್‌ ಮತ್ತು 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ. ‌