Home Crime ಬೈಂದೂರು : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : ಇಬ್ಬರು ವಶಕ್ಕೆ…!!

ಬೈಂದೂರು : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : ಇಬ್ಬರು ವಶಕ್ಕೆ…!!

ಗಂಗೊಳ್ಳಿ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರು ಬಂಧಿಸಿದ ವ್ಯಕ್ತಿಗಳು ರವೀಂದ್ರ ಹಾಗೂ ವಿಕ್ರಮ್ ಎಂದು ಗುರುತಿಸಲಾಗಿದೆ. ಇಬ್ಬರು ಓಡಿ ಹೋದವರು ಉಮೇಶ್ ಮತ್ತು ಸುಧಾಕರ್ ಎಂದು ತಿಳಿದು ಬಂದಿದೆ.

ಪೊಲೀಸರು ಕೋಳಿ ಅಂಕಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ

ಪ್ರಕರಣ ವಿವರ : ದಿನಾಂಕ 13/07/2025 ರಂದು ಪವನ್‌ ನಾಯಕ್, ಪೊಲೀಸ್‌ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್‌ ಠಾಣೆ ಇವರಿಗೆ ಗುಜ್ಜಾಡಿ ಗ್ರಾಮದ ಮಂಕಿ ಬಳಿಯ ದ್ಯಾಸನಮಕ್ಕಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿ ಆಪಾದಿತ ರವೀಂದ್ರ ಮತ್ತು ವಿಕ್ರಮ್ ಇವರನ್ನು ವಶಕ್ಕೆ ಪಡೆದಿದ್ದು, ಓಡಿ ಹೋದವರ ಹೆಸರು, ವಿಳಾಸ ವಿಚಾರಿಸಲಾಗಿ ಉಮೇಶ , ಸುಧಾಕರ ಎಂದು ತಿಳಿಸಿರುತ್ತಾರೆ. ಕೋಳಿ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ -5, ಕತ್ತಿ – 05 ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ-5 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದು ನಗದು ಹಣ 2,200/- ರೂಪಾಯಿ ಕಂಡು ಬಂದಿದ್ದು, ಸ್ಥಳದಲ್ಲಿ ಆಪಾದಿತರು ಬಂದ 1) ಟಿವಿಎಸ್‌ ಕಂಪೆನಿಯ KA-20-EW-6343 ನೇ ಮೋಟಾರು ಸೈಕಲ್‌, 2)ಬಜಾಜ್‌ ಡಿಸ್ಕವರ್‌ ಕಂಪೆನಿಯ KA-20-EC-3736 ನೇ ಮೋಟಾರು ಸೈಕಲ್‌ 3) ಹೊಂಡಾ ಮ್ಯಾಟ್ರಿಕ್ಸ್‌ ಕಂಪೆನಿಯ KA-20-EM-7544 ನೇ ಮೋಟಾರು ಸೈಕಲ್‌ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿತರು ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿಅಂಕ ಜುಗಾರಿ ಆಟ ನಡೆಸಿರುವುದಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2025 ಕಲಂ: 11 (1) (A) The Preventions of Cruelty to Animal Act 1960 ಮತ್ತು 87 93 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.