ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮರಕ್ಕೆ ನಲೈನ್ ಹಗ್ಗ ಕಟ್ಟಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಹಳ್ಳಿಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳುಗೋಡು ಎಂಬಲ್ಲಿ ಮುಖ್ಯ ಶಿಕ್ಷಕರಾದ ಕುಬೇರ ಎಂದು ತಿಳಿದು ಬಂದಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸಾರಾಂಶ : ಪಿರ್ಯಾದಿದಾರರಾದ ಸುಮಿತಾ , ಹೊಸಂಗಡಿ ಗ್ರಾಮ, ಕುಂದಾಪುರ ಇವರ ಗಂಡ ಕುಬೇರ (49) ರವರು ಹಳ್ಳಿಹೊಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳುಗೋಡು ಎಂಬಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸವನ್ನು ಮಾಡಿಕೊಂಡಿದ್ದು, ಅವರು ಪಿರ್ಯಾದಿದಾರರ ಬಳಿ ಸರಕಾರಿ ಶಾಲೆಯ ನಿಯಮದ ಪ್ರಕಾರ ಒಂದು ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಳಿಸುವುದಾಗಿ ಪಿರ್ಯಾದಿದಾರರ ಬಳಿ ಹೇಳಿದ್ದು ಪ್ರಸ್ತುತ ಪಿರ್ಯಾದಿದಾರರ ಗಂಡ ಕೆಲಸ ಮಾಡುವ ಶಾಲೆಯಲ್ಲಿ 53 ವಿದ್ಯಾರ್ಥಿಗಳಿರುವುದರಿಂದ ಕುಬೇರ ರವರು ಕಳೆದ 1 ತಿಂಗಳಿನಿಂದ ತನಗೆ ಆ ಶಾಲೆಯಿಂದ ವರ್ಗಾವಣೆಯಾಗುವುದಾಗಿ ಭಾವಿಸಿ ಚಿಂತೆಗೀಡಾಗಿದ್ದರು ದಿನಾಂಕ 07/07/2025 ರಂದು ಎಂದಿನಂತೆ ಕುಬೇರ ರವರು ಶಾಲೆಗೆ ಹೋಗಿದ್ದು 11:45 ಗಂಟೆಗೆ ಪಿರ್ಯಾದಿದಾರಿಗೆ ಕುಬೇರ ರವರು ಕಮಲಶೀಲೆ ಗ್ರಾಮದ ಕಮಲಶೀಲೆ ಪಾರೆ ಎಂಬಲ್ಲಿ ಹುಣಗಲ್ ಮರಕ್ಕೆ ಹಳದಿ ಬಣ್ಣದ ನೈಲಾನ್ ಹಗ್ಗ ವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವ ಸ್ಥಿತಿಯಲ್ಲಿಇರುವುದಾಗಿ ದೂರವಾಣಿ ಮುಖಾಂತರ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಕೂಡಲೇ ಆ ಸ್ಥಳಕ್ಕೆ ಹೋಗಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದವರನ್ನು ನೋಡಿದ್ದು, ಆಗ ಕೂಡಲೇ ಅಲ್ಲಿ ಸೇರಿದ ಜನರು ಅವರನ್ನು ನೇಣಿನಿಂದ ಕೆಳಗೆ ಇಳಿಸಿ ಸಿದ್ದಾಪುರ PHC ಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 13:00 ಗಂಟೆಗೆ ಕುಬೇರ ರವರು ಮೃತಪಟ್ಟಿರುವುದಾಗಿ ತೀಳಿಸಿರುತ್ತಾರೆ. ಪಿರ್ಯಾದಿದಾರರ ಗಂಡ ಪ್ರಸ್ತುತ ಕೆಲಸ ಮಾಡುವ ಸ್ಥಳದಿಂದ ಬೇರೆ ಕಡೆಗೆ ವರ್ಗಾವಣೆಯಾಗುವ ಭಯದಿಂದ ಅಥವಾ ಇನ್ಯಾವುದೋ ಕಾರಣದಿಂದ ದಿನಾಂಕ 07/07/2025 ರಂದು ಬೆಳಿಗ್ಗೆ 09:00 ಗಂಟೆಯಿಂದ 13:00 ಗಂಟೆಯ ನಡುವಿನ ಸಮಯದಲ್ಲಿ ಕಮಲಶೀಲೆ ಗ್ರಾಮದ ಕಮಲಶೀಲೆ ಪಾರೆ ಎಂಬಲ್ಲಿ ಹುಣಗಲ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.