ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಜೀವನ್ ಎಂಬವರಿಗೆ ಆರೋಪಿ ಆದಿತ್ಯ ಮತ್ತು ಇತರರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಯಲಾಗಿದೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ : ಆಪಾದಿತ ಆದಿತ್ಯ ಎಂಬುವವನು ಬಸ್ರೂರು ಗ್ರಾಮದ ಕೋಳ್ಕೆರೆ ಜನತಾ ಕಾಲೋನಿಲ್ಲಿ ಪಿರ್ಯಾದಿದಾರರಾದ ಜೀವನ್ (24),ಬಸ್ರೂರು ಗ್ರಾಮ, ಕುಂದಾಪುರ ಇವರ ತಮ್ಮ ಹಾಗೂ ಮಕ್ಕಳನ್ನು ಹೆದರಿಸಿ ಡಾನ್ ನಂತೆ ವರ್ತಿಸುತ್ತಿದ್ದು ಈ ರೀತಿ ವರ್ತನೆ ಮಾಡದಂತೆ ಪಿರ್ಯಾದಿದಾರರ ತಮ್ಮ ಆಪಾದಿತನಿಗೆ ತಿಳಿಸಿದ್ದು ಈ ವಿಚಾರವನ್ನು ಪಿರ್ಯಾದಿದಾರರಲ್ಲಿ ತಿಳಿಸಿರುತ್ತಾರೆ. ಆ ಬಳಿಕ ಆಪಾದಿತ ಆದಿತ್ಯ ಪಿರ್ಯಾದುದಾರರಿಗೂ ಫೋನ್ ಮಾಡಿ ಬೆದರಿಕೆ ಹಾಕಿ ದಿನಾಂಕ 06/07/2025 ರಂದು ಸಂಜೆ 03:50 ಗಂಟೆಗೆ ಬಸ್ರೂರು ಗ್ರಾಮದ ಕೋಳ್ಕೆರೆ ಅಶ್ವತನ ಕಟ್ಟೆಯ ಬಳಿ ಬರುವಂತೆ ಹೇಳಿ ಆ ಸಮಯ ಪಿರ್ಯಾದಿದಾರರು ಸ್ಥಳಕ್ಕೆ ಹೋದಾಗ ಆಗ ಸ್ಥಳದಲ್ಲಿ ಆದಿತ್ ಮತ್ತು ಮನೀಷ್ ರವರು ಇದ್ದಿದ್ದು ಆಪಾದಿತ ಮನೀಷ್ ಪಿರ್ಯಾದಿದಾರರನ್ನು ಹಿಡಿದುಕೊಂಡು ಆದಿತ್ಯ ಪಿರ್ಯಾದಿದಾರರಿಗೆ ನಿಂದನೆ ಮಾಡಿ ಸಾರ್ವಜನಿಕ ರಸ್ತೆಯ ಮೇಲೆ ಕೈಯಿಂದ ಹೊಡೆದು, ಬೈಕ್ ಕೀ ತೆಗೆದುಕೊಂಡು ಪಂಚ್ ಮಾಡಿರುತ್ತಾನೆ. ಅಲ್ಲದೇ ಆ ಸಮಯ ಕಾರಿನಲ್ಲಿ ಬಂದಂತಹ ಆಪಾದಿರಾದ ರಾಕೇಶ್ , ನಂದ, ನಾಗ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ರವರು ಆದಿತ್ಯ ಮತ್ತು ಮನೀಷ್ ಜೊತೆ ಸೇರಿ ಕೈಯಿಂದ, ಕೋಲಿನಿಂದ, ಕಲ್ಲಿನಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದಿರುತ್ತಾರೆ. ಹಲ್ಲೆಯಿಂದ ಪಿರ್ಯಾದಿದಾರರಿಗೆ ಮೈ ಕೈ ಗೆ ತರಚಿದ ಗಾಯ ಹಾಗೂ ತುಟಿಗೆ, ಕೈ ಬೆರಳಿಗೆ ರಕ್ತ ಗಾಯ ಉಂಟಾಗಿದ್ದು, ತಲೆಗೆ, ಬೆನ್ನಿಗೆ ಒಳ ನೋವುಂಟಾಗಿರುತ್ತದೆ. ಆ ಸಮಯ ತಪ್ಪಿಸಲು ಬಂದ ರಾಜೀವ ಎಂಬುವವರಿಗೂ ಆದಿತ್ಯ ಕೈಯಿಂದ ಕನ್ನೆಗೆ ಹೊಡೆದು ದೂಡಿ ಹಾಕಿದ್ದು ಅಲ್ಲದೇ ರಸ್ತೆಯಲ್ಲಿ ಎಳೆದಿರುತ್ತಾರೆ. ಇದರಿಂದ ರಾಜೀವ ರವರ ಕಾಲಿಗೆ, ಕೆನ್ನೆಗೆ ತರಚಿದ ಗಾಯವಾಗಿರುತ್ತದೆ.
ಅಲ್ಲದೇ ಪಿರ್ಯಾದಿದಾರರಿಗೆ ಆಪಾದಿತರು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2025 ಕಲಂ: 115(2), 118(1), 352, 351(2) ಜೊತೆಗೆ 3(5) BNS ಮತ್ತು 3(1)(r)(s), 3(2)(va) SC/ST(POA) Act ರಂತೆ ಪ್ರಕರಣ ದಾಖಲಾಗಿರುತ್ತದೆ.