ಕಾರ್ಕಳ: ಮೊಬೈಲ್ ನಲ್ಲಿ ಯುವಕನೊಬ್ಬ ಆನ್ ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾಗ ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ನಿಖಿಲ್ ಎಂದು ಗುರುತಿಸಲಾಗಿದೆ.
ಪ್ರಕರಣದ ಸಾರಾಂಶ : ದಿನಾಂಕ 04/07/2025 ರಂದು 16:30 ಗಂಟೆಗೆ ಆಪಾದಿತ ನಿಖಿಲ್ ಎಂಬಾತ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್‌ಸ್ಟ್ಯಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಮೊಬೈಲ್‌ನಲ್ಲಿ PARKER ಎಂಬ ಮೊಬೈಲ್ ಆಪ್ ಸಹಾಯದಿಂದ ತನ್ನ ಮೊಬೈಲ್ ಪೋನ್ ಮೂಲಕ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟ ಆಡುತ್ತಿರುವ ಬಗ್ಗೆ ಶಿವಕುಮಾರ್ ಎಸ್ ಆರ್, ಪೊಲೀಸ್ ಉಪನಿರೀಕ್ಷಕರು(ತನಿಖೆ), ಕಾರ್ಕಳ ನಗರ ಪೊಲೀಸ್ ಠಾಣೆದಾ ಇವರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟಕ್ಕೆ ಬಳಸಿದ ಮೋಬೈಲ್ ಪೋನ್ ನ್ನು ವಶಪಡಿಸಿಕೊಂಡಿದ್ದು, ಆರೋಪಿ ಮತ್ತು ಇತರ ಆರೋಪಿಗಳಾದ ಚರಣ್, ಜಮೀರ್ ಇವರು ಸಂಘಟಿತರಾಗಿ ತಮ್ಮ ಸ್ವಂತ ಲಾಭಕ್ಕೋಸ್ಕರ ಮೊಬೈಲ್ ಫೋನ್ ಮೂಲಕ ಜನರಿಂದ ಹಣವನ್ನು ಪಣವಾಗಿ ಪಡೆದು ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟ ಆಡಿರುವುದಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2025 ಕಲಂ: 78(1) (iii), KP ACT, 112(1)̧,3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ