Home Karavali Karnataka ಲಯನ್ಸ್ ಕ್ಲಬ್ ಉಡುಪಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ…!!

ಲಯನ್ಸ್ ಕ್ಲಬ್ ಉಡುಪಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ…!!

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ನಡೆಯಿತು.

ನೂತನ ಅಧ್ಯಕ್ಷ ದಿನೇಶ್ ಕಿಣಿ ಹಾಗೂ ಅವರ ತಂಡಕ್ಕೆ ಲಯನ್ಸ್ ಜಿಲ್ಲೆ 317 ಡಿ ಯ ದ್ವಿತೀಯ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮೂವರು ಸದಸ್ಯರನ್ನು ಹೊಸ ಸದಸ್ಯರನ್ನು – ರಾಜೇಂದ್ರ ಬಾಳಿಗಾ, ರವೀಶ್ ಪೈ ಹಾಗೂ ಉಮೇಶ್ ಮಾರ್ಪಳ್ಳಿ ಅವರನ್ನು ಲಯನ್ಸ್ ಕ್ಲಬ್ ಉಡುಪಿಗೆ ಸೇರ್ಪಡೆಗೊಳಿಸಲಾಯಿತು.

ಲಯನ್ಸ್ ಸೇವಾ ಕಾರ್ಯಕ್ರಮದ ಅಂಗವಾಗಿ ಇಂದಿರಾ ನಗರದ ಮಹಿಳೆಯೋರ್ವರಿಗೆ ರೋರ್ವರಿಗೆ ಹೊಲಿಗೆ ಯಂತ್ರ, ಅಂಬಲಪಾಡಿ ಲಯನ್ಸ್ ಕ್ಲಬ್ಬಿನ ಸಭಾ ಭವನ ನಿರ್ಮಾಣಕ್ಕೆ ಕಟ್ಟಡ ನಿಧಿ, ಕಿದಿಯೂರು ವಿದ್ಯಾ ಸಮುದ್ರ ತೀರ್ಥ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪಾಂಗಾಳದ ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಧನ ಸಹಾಯ, ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ವೇತನ, ಶಾಲಾ ಬಾಲಕಿಯ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ ಅವರು ಗೋವರ್ಧನ್ ಶೆಟ್ಟಿ- ಸುಪ್ರಿತಾ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಬಂಗೇರ, ಜಿಲ್ಲಾ ಸಂಪುಟ ಕೋಶಾಧಿಕಾರಿ ಶಶಿಧರ್ ಶೆಟ್ಟಿ, ಪ್ರಾಂಥ್ಯ 2ರ ಪ್ರಾಂಥ್ಯಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು.

ನೂತನ ಕೋಶಾಧಿಕಾರಿ ರಮಾನಂದ ಎಲ್. ನಾಯಕ್, ನಿರ್ಗಮನ ಲಯನ್ಸ್ ಕಾರ್ಯದರ್ಶಿ ಪ್ರಕಾಶ್ ಎಂ.ಡಿ. ಭಟ್, ನಿರ್ಗಮನ ಕೋಶಾಧಿಕಾರಿ ಲೆಸ್ಲಿ ಅರವಿಂದ್ ಕರ್ನೇಲಿಯೊ, ನಿರ್ಗಮನ ಲಿಯೋ ಅಧ್ಯಕ್ಷ ಲೆನನ್ ಕರ್ನೇಲಿಯೊ, ನೂತನ ಲಿಯೊ ಅಧ್ಯಕ್ಷೆ ಅವನಿ ಕಿಣಿ, ಕಾರ್ಯದರ್ಶಿ ರಿಶೀತಾ ದೀವಾ, ಕೋಶಾಧಿಕಾರಿ ಭೂಮಿಕಾ ಎಂ., ಲಯನ್ ಲೇಡಿ ಕೌನ್ಸಿನ್ ನ ನಿರ್ಗಮನ ಅಧ್ಯಕ್ಷೆ ಲಾಯ್ಸೆಟ್ ಕರ್ನೇಲಿಯೊ, ನಿರ್ಗಮನ ಕಾರ್ಯದರ್ಶಿ ಶ್ರೀಲಕ್ಷ್ಮೀ ಭಟ್, ನಿರ್ಗಮನ ಕೋಶಾಧಿಕಾರಿ ಸುಷ್ಮಾ ಮಂಜುನಾಥ್, ನೂತನ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ನೂತನ ಕಾರ್ಯದರ್ಶಿ ರಾಧಿಕಾ ಆರ್. ಶೆಣೈ ಹಾಗೂ ನೂತನ ಕೋಶಾಧಿಕಾರಿ ಸುಜಯಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷ ಹಾಗೂ ನೂತನ ವಲಯಾಧ್ಯಕ್ಷ ಲೂಯಿಸ್ ಲೋಬೊ ಸ್ವಾಗತಿಸಿದರು. ಲಯನ್ಸ್ ಭವನ ಸಮಿತಿ ಅಧ್ಯಕ್ಷ ರಾಜಗೋಪಾಲ್ ಎಸ್. ಅತಿಥಿಗಳನ್ನು ಪರಿಚಯಿಸಿದರು. ರೂಪಾ ಡಿ. ಕಿಣಿ ನೂತನವಾಗಿ ಸೇರ್ಪಡೆಗೊಂಡ ಸದಸ್ಯರನ್ನು ಪರಿಚಯಿಸಿದರು. ಮನೋಜ್ ಪ್ರಭು ಧ್ವಜ ವಂದನೆ ಗೈದರು. ನೂತನ ಕಾರ್ಯದರ್ಶಿ ಡಾ. ರೋಷನ್ ಕುಮಾರ್ ಶೆಟ್ಟಿ ವಂದಿಸಿದರು.

ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.
ರಂಜನಾ ಶ್ರೀಧರ್ ಶೆಟ್ಟಿ ಪ್ರಾರ್ಥನೆ ಹಾಡಿದರು.