ಕಾಪು : ಉಡುಪಿ ಜಿಲ್ಲೆಯ ಕಾಪು ಬಾರ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಹಲ್ಲೆಗೊಳಾಗದ ವ್ಯಕ್ತಿ ಕೊಳಲಗಿರಿ ನಿವಾಸಿ ದಿನೇಶ್ ಎಂದು ತಿಳಿಯಲಾಗಿದೆ.
ದಿನೇಶ್ ಎಂಬವರು ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ವಿರುದ್ಧ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಫಿರ್ಯಾದಿ ದಿನೇಶ್ (54) ಕೊಳಲಗಿರಿ ಗ್ರಾಮ, ಉಡುಪಿ ತಾಲೂಕು ಇವರು ಕಟಪಾಡಿಯ ನವರಂಗ ಬಾರ್ & ರೆಸ್ಟೋರೆಂಟ್ ನಲ್ಲಿ ವೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 30-06-2025ರಂದು ಬಾರ್ ನಲ್ಲಿ ಕೆಲಸದಲ್ಲಿರುವಾಗ ರಾತ್ರಿ 10:15 ಗಂಟೆಗೆ ಪಿರ್ಯಾದುದಾರರ ಪರಿಚಯದ ಅಭಿಷೇಕ್ ಶ್ರೀಯಾನ್, ರಝನ್, ಸಂಪತ್ ಮತ್ತು ಪರಿಚಯ ಇರದ ಇಬ್ಬರು ಸೇರಿ ಬಾರ್ ನಲ್ಲಿ ಅವರೊಳಗೆ ಗಲಾಟೆ ಮಾಡುತ್ತಿದ್ದುದನ್ನು ನೋಡಿ ಪಿರ್ಯಾದುದಾರರು ಈ ರೀತಿ ಬಾರ್ ನೊಳಗೆ ಗಲಾಟೆ ಮಾಡಬೇಡಿ ಎಂದು ಹೇಳಿದಾಗ ಎಲ್ಲರೂ ಸೇರಿಕೊಂಡು ಪಿರ್ಯಾದುದಾರರಿಗೆ ಅವಾಚ್ಚ್ಯ ಶಬ್ದಗಳಿಂದ ಬೈಯ್ಯುತ್ತ ಅಭಿಷೇಕ್ ಶ್ರೀಯಾನ್ ನು ಕೆನ್ನೆಗೆ ಹೊಡೆದು ಇತರರು ಕಾಲಿನಿಂದ ಎದೆಗೆ ಮುಖಕ್ಕೆ ತುಳಿದು ನಂತರ ಹೊರಗೆ ಹೋಗಿ ಒಂದು ದೊಣ್ಣೆಯನ್ನು ತಂದು ಇತರರೊಂದಿಗೆ ಸೇರಿಕೊಂಡು ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದ ತಲೆಯ ಹಿಂಭಾಗ ಹೊಡೆದು ಮನಬಂದಂತೆ ಕೈಯಿಂದ, ಕಾಲಿನಿಂದ ಹಾಗೂ ದೊಣ್ಣೆಯಿಂದ ಹೊಡೆದಿದ್ದು ಆಗ ಸುಮಿತ್, ಸಂಪತ್ ಮತ್ತು ಸಂಜೀವ್ ಎಂಬುವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ನಂತರ ಅಭಿಷೇಕ್ ಶ್ರೀಯಾನ್ ಹಾಗೂ ಮತ್ತಿರರು ಸೇರಿ ನೀನು ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಪಿರ್ಯಾದುದಾರರಿಗೆ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಪಿರ್ಯಾದುದಾರರನ್ನು ಸುಮಿತ್ ಮತ್ತು ಸಂಜೀವ್ ರವರು ಉಪಚರಿಸಿದ್ದು ನಂತರ ಸುಧಾರಿಸಿಕೊಂಡು ಮನೆಗೆ ಹೋಗಿರುತ್ತಾರೆ. ದಿನಾಂಕ: 01-07-2025ರಂದು ಪಿರ್ಯಾದುದಾರರಿಗೆ ನೋವು ಉಲ್ಭಣಗೊಂಡು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದದಾರರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 89/2025 ಕಲಂ: ಕಲಂ: 189(2), 191(2), 191(3), 118(1), 109, 352, 351(2) ಜೊತೆಗೆ 190 BNS ನಂತೆ ಪ್ರಕರಣ ದಾಖಲಾಗಿರುತ್ತದೆ.