Home Crime ಬೆಳ್ತಂಗಡಿ : ಮಧ್ಯರಾತ್ರಿ ವರೆಗೂ ಜಯಂತ್.ಟಿ ಅವರ ಎಸ್.ಐ.ಟಿ ವಿಚಾರಣೆ, ಇಂದು ಮತ್ತೆ ವಿಚಾರಣೆ…!!

ಬೆಳ್ತಂಗಡಿ : ಮಧ್ಯರಾತ್ರಿ ವರೆಗೂ ಜಯಂತ್.ಟಿ ಅವರ ಎಸ್.ಐ.ಟಿ ವಿಚಾರಣೆ, ಇಂದು ಮತ್ತೆ ವಿಚಾರಣೆ…!!

ಎಸ್.ಐ.ಟಿ ವಶದಲ್ಲಿರುವ ಅಭಿಷೇಕ್ ಗೂ ಇಂದು ವಿಚಾರಣೆ…!

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್.ಟಿ ಅವರ ಎಸ್.ಐ.ಟಿ ವಿಚಾರಣೆಗೆ ಸೆ.4 ರಂದು ಸಂಜೆ 5:20 ಕ್ಕೆ ಬ್ಯಾಗ್ ಜತೆ ಹಾಜರಾಗಿದ್ದು, ಅಧಿಕಾರಿಗಳು ಮಧ್ಯರಾತ್ರಿ 2:30 ರವರೆಗೆ ವಿಚಾರಣೆ ಮಾಡಿ ಸೆ.5 ರಂದು ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದಾರೆ.

ಮತ್ತೊಂದೆಡೆ ಬುರುಡೆ ಪ್ರಕರಣ ಮತ್ತು ಸುಜಾತಾ ಭಟ್ ಪ್ರಕರಣ ಸಂಬಂಧ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಸೆ.3 ರಂದು ಎಸ್.ಐ.ಟಿ ವಿಚಾರಣೆಗೆ ಹೋಗಿ ಮುಂದುವರಿದ ಭಾಗವಾಗಿ ಸೆ.4 ರಂದು ಕೂಡ ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದರು. ಇದೀಗ ಎಸ್.ಐ.ಟಿ ವಶದಲ್ಲಿರುವ ಅಭಿಷೇಕ್ ಸೆ.5 ರಂದು ಅಧಿಕಾರಿಗಳು ವಿಚಾರಣೆ ಮುಂದುವರಿಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಾಡಿನಲ್ಲಿ ಬುರುಡೆ ಹುಡುಕಿದ್ದು, ನ್ಯಾಯಾಲಯಕ್ಕೆ ಬುರುಡೆ ಹಾಜರು ಪಡಿಸಿದ್ದು ಸೇರಿದಂತೆ, ಚಿನ್ನಯ್ಯನ ಸಂಪರ್ಕ ಇವೆಲ್ಲದಕ್ಕೂ ಜಯಂತ್ ಟಿ., ಅಭಿಷೇಕ್ ನಡುವೆ ಘಟನೆಯಲ್ಲಿ ಷಡ್ಯಂತ್ರ ನಡೆಸಲು ಬಹುಪಾಲು ಇವರದು ಮಾಸ್ಟರ್ ಮೈಂಡ್ ಇರುವ ಸಾಧ್ಯತೆಯಿಂದ ತೀವ್ರವಾದ ವಿಚಾರಣೆಗೆ ಒಳಗಾಗುವ ಸಾಧ್ಯತೆಯಿದೆ.