Home Karavali Karnataka ಬೈಂದೂರಿನಲ್ಲಿ ಮೂರು ದಿನಗಳ ಹಲಸು ಹಾಗೂ ಕೃಷಿ ಮೇಳ ಉದ್ಘಾಟನೆ…!!

ಬೈಂದೂರಿನಲ್ಲಿ ಮೂರು ದಿನಗಳ ಹಲಸು ಹಾಗೂ ಕೃಷಿ ಮೇಳ ಉದ್ಘಾಟನೆ…!!

ಬೈಂದೂರು : ಸಮಷ್ಠಿ ಪ್ರತಿಷ್ಠಾನ,ರೈತೋತ್ಧಾನ ಬಳಗ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಯೋಗದಲ್ಲಿ ಯಡ್ತರೆ ಬಂಟರಯಾನೆ ನಾಡವರ ಸಂಕೀರ್ಣದಲ್ಲಿ ನಡೆದ ಮೂರು ದಿನಗಳ ಕಾಲ ಹಲಸು ಹಾಗೂ ಕೃಷಿ ಮೇಳ  ಕಾರ್ಯಕ್ರಮ ಸಂಭ್ರಮದಲ್ಲಿ ಜರಗಿತು.

ಉದ್ಯಮಿ ಗೋಕುಲ ಶೆಟ್ಟಿ ಉಪ್ಪುಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬೈಂದೂರು ಆಧುನಿಕ ಕೃಷಿ ಪದ್ದತಿಯ ಅಳವಡಿಕೆಯಿಂದ ಕೃಷಿಯನ್ನು ಲಾಭದಾಯಕವಾಗಿ ಬೆಳೆಸಬಹುವುದಾಗಿದೆ.ಕಾಲದ ಬದಲಾವಣೆಗೆ ಒಗ್ಗಿಕೊಂಡಂತೆ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಗಳು ರೈತರಿಗೆ ಲಾಭವನ್ನು ಹೆಚ್ಚಿಸುತ್ತದೆ.ರೈತರು ಬೆಳೆದ ಬೆಳೆಗಳು ನೇರವಾಗಿ ಗ್ರಾಹಕರಿಗೆ ದೊರೆತಾಗ ಕೃಷಿ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಿ ಮುನ್ನೆಡೆಯುತ್ತದೆ.ಇಂತಹ ಮೇಳಗಳ ಮುಖಾಂತರ ಗ್ರಾಮೀಣ ಭಾಗದ ರೈತರಿಗೆ ಹೊಸ ವಿಧಾನಗಳ ಪರಿಚಯವಾಗುತ್ತದೆ.ಈ ಮೇಳವು ಮೂರು ದಿನಗಳ ವರೆಗೆ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು
ಹೇಳಿದರು.

ಈ ಸಂದರ್ಭದಲ್ಲಿ ಉತ್ಸವ ಸಮಿತಿ
ಸಮೃದ್ದ ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ,ಮಾಜಿ ಜಿ.ಪಂ ಅಧ್ಯಕ್ಷ ಎಸ್.ರಾಜು ಪೂಜಾರಿ,ಉದ್ಯಮಿ ಜಯಾನಂದ ಹೋಬಳಿದಾರ್,ಶಾಸಕರ ಧರ್ಮಪತ್ನಿ ಅನುರಾಧಾ ಗಂಟಿಹೊಳೆ,ಹಿರಿಯ ಕೃಷಿಕರಾದ ವೆಂಕಟೇಶ ಹೆಬ್ಬಾರ್,ಮಾಜಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ,ಧ.ಗ್ರಾ.ಯೋ ಭಜನಾ ಪರಿಷತ್ ಅಧ್ಯಕ್ಷ ಹಾಗೂ ಉದ್ಯಮಿ ರಘುರಾಮ ಕೆ.ಪೂಜಾರಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಉತ್ಸವ ಸಮಿತಿ ಸಹಸಂಚಾಲಕ ಶ್ರೀ ಗಣೇಶ ಉಪ್ಪುಂದ,ಸಂದೇಶ ಭಟ್ ಉಪ್ಪುಂದ  ಉಪಸ್ಥಿತರಿದ್ದರು.

ಹಲಸು ಮೇಳದ ಸಂಯೋಜಕ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿದರು.ಸಂಯೋಜಕ ಶ್ರೀಧರ ಖಾರ್ವಿ ಮರವಂತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.