Home Crime ಪಡುಬಿದ್ರಿ : ಇನ್ನಾ ಗ್ರಾಮದ ಯುವಕ ನಾಪತ್ತೆ….!!

ಪಡುಬಿದ್ರಿ : ಇನ್ನಾ ಗ್ರಾಮದ ಯುವಕ ನಾಪತ್ತೆ….!!

ಪಡುಬಿದ್ರಿ: ಕುಡಿತದ ಚಟ ಹೊಂದಿದ್ದ ಇನ್ನಾ ಗ್ರಾಮದ ಗಾಂದೊಟ್ಯ ಹೌಸ್ ನಿವಾಸಿ ಸುಜಿತ್ ಎಸ್. ಶೆಟ್ಟಿ (28) ಕಾಂಜರಕಟ್ಟೆಯ ಬಾರಿನಲ್ಲಿ ಹಿಡಿದಿಟ್ಟುಕೊಂಡಿರುವ ತನ್ನ ಪರ್ಸ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ತರುವುದಾಗಿ ಮನೆಯಲ್ಲಿ ತಿಳಿಸಿ ಜೂ. 1ರಂದು ಹೊರಗೆ ಹೋದವರು ಹಿಂದಿರುಗಿ ಮನೆಗೆ ಬಾರದೇ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಜೂ. 3ರಂದು ರಾತ್ರಿ ಈತನನ್ನು ರಿಕ್ಷಾ ಚಾಲಕರೊಬ್ಬರು ನೋಡಿದ್ದು ಮನೆಗೆ ಬಿಡುವೆನೆಂದರೂ ಬಾರದೇ ತನಗೆ ಬೇರೆ ವಾಹನವು ಬರುವುದಾಗಿ ಸುಜಿತ್ ತಿಳಿಸಿದ್ದರೆಂದೂ ಪೊಲೀಸರಿಗಿತ್ತ ದೂರಿನಲ್ಲಿ ತಿಳಿಸಲಾಗಿದೆ.

ಸಂಬಂಧಿಕರಲ್ಲಿಯೂ ವಿಚಾರಿಸಿದ ಬಳಿಕ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.

5.5 ಅಡಿ ಎತ್ತರ, ದೃಢಕಾಯ, ಬಿಳಿ ಮೈಬಣ್ಣ, ಕೈಯಲ್ಲಿ ಟ್ಯಾಟು ಇದ್ದು ತುಳು, ಕನ್ನಡ, ಹಿಂದಿ, ಇಂಗ್ಲೀಷ್ ಮಾತಾಡಬಲ್ಲವರಾಗಿದ್ದಾರೆ. ಕಪ್ಪು ಟಿ ಶರ್ಟ್ ಹಾಗೂ ಕಪ್ಪು ಪ್ಯಾಂಟು ಧರಿಸಿರುವ ಸುಜಿತ್ ಶೆಟ್ಟಿ ಕುರಿತಾಗಿ ಯಾರಿಗಾದರೂ ತಿಳಿದುಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ (08202555452)ಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.