Home Crime ಯುವಕನೋರ್ವ ಚಲಿಸುತ್ತಿದ ರೈಲಿನಿಂದ ಆಯ ತಪ್ಪಿ ಟ್ರಾಕ್‌ ಗೆ ಬಿದ್ದು ಸಾವು…!!

ಯುವಕನೋರ್ವ ಚಲಿಸುತ್ತಿದ ರೈಲಿನಿಂದ ಆಯ ತಪ್ಪಿ ಟ್ರಾಕ್‌ ಗೆ ಬಿದ್ದು ಸಾವು…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಯುವಕನೋರ್ವ ಚಲಿಸುತ್ತಿದ ರೈಲಿನಿಂದ ಆಯ ತಪ್ಪಿ ಕೆಳಗೆ ಟ್ರಾಕ್‌ ಗೆ ಬಿದ್ದು ಗಂಬೀರ ಗಾಯಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ.

ಸಾವನ್ನಪ್ಪಿದ ಯುವಕ ಸೇಪು ರಹೇಮಾನ್ ಎಂದು ತಿಳಿದು ಬಂದಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ದಿನಾಂಕ 17/03/2026 ರಂದು ಪಿರ್ಯಾದಿದಾರರಾದ ನಿಸಾಮ್‌ (29), ಕೋಲ್ಲಮ್‌ ಜಿಲ್ಲೆ ಇವರು ಸಂಬಂಧಿಕರಾದ ಸೇಪು ರಹೇಮಾನ್‌ ಮತ್ತು ಸಾಧಿಕ್‌ ರವರು ಗೋವಾ ಮಡಗಾಂವ್‌ನಿಂದ ತ್ರಿವೆಂಡ್ರಮ್‌ ನಾರ್ತ ಸೂಪರ್‌ ಪಾಸ್ಟ್‌ ಎಕ್ಸ್‌ಪ್ರೆಸ್‌ 22660 ರಲ್ಲಿ ರಾತ್ರಿ 19:50 ಗಂಟೆಗೆ ಹೊರಟಿದ್ದು ರಾತ್ರಿ 21:00 ಗಂಟೆಗೆ ಸೇಪು ರಹೇಮಾನ್‌(33) ರವರು ಮೊಬೈಲ್‌ ನಲ್ಲಿ ಮಾತಾಡಿಕೊಂಡು ಸೀಟಿನಿಂದ ಹೊರಗಡೆ ಬಂದು ಡೋರ್‌ ಸಮೀಪದಲ್ಲಿ ಮೊಬೈಲ್‌ ನಲ್ಲಿ ಮಾತಾಡಿಕೊಂಡಿದ್ದಾಗ ಬೈಂದೂರು ಕಿರಿಮಂಜೇಶ್ವರದ ಹೈಸ್ಕೂಲ್‌ ಹತ್ತಿರ ಬರುವಾಗ ಚಲಿಸುತ್ತಿದ ರೈಲಿನಿಂದ ಆಯ ತಪ್ಪಿ ಕೆಳಗೆ ಟ್ರಾಕ್‌ ಗೆ ಬಿದ್ದು ಗಂಬೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ