Home Kundapura News ಮಳಿಚಿಪ್ಪು ಹೆಕ್ಕಲು ಹೋದ ಯುವಕ ಹೊಳೆಯಲ್ಲಿ ಮುಳುಗಿ ನೀರುಪಾಲು…!!

ಮಳಿಚಿಪ್ಪು ಹೆಕ್ಕಲು ಹೋದ ಯುವಕ ಹೊಳೆಯಲ್ಲಿ ಮುಳುಗಿ ನೀರುಪಾಲು…!!

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಅರಾಟೆ ಸೇತುವೆ ಬಳಿ ಹೊಳೆಯಲ್ಲಿ ಮರುವಾಯಿ (ಮಳಿಚಿಪ್ಪು) ಹೆಕ್ಕುತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಹಂಗಳೂರಿನ ಚಂದ್ರ (39) ಎಂದು ಗುರುತಿಸಲಾಗಿದೆ.

ಚಂದ್ರ ಅವರು ತನ್ನ ಸಂಬಂಧಿಕ ಅಜಿತ್ ಅವರೊಂದಿಗೆ ಮಂಗಳವಾರ ಬೆಳಗ್ಗೆ 10ಗಂಟೆಗೆ ಅರಾಟೆ ಸೇತುವೆ ಬಳಿ ಮಳಿ ಹೆಕ್ಕಲು ಹೋಗಿದ್ದರು. ಕೆಲ ಹೊತ್ತಿನ ಬಳಿಕ ನೋಡಿದಾಗ ಚಂದ್ರ ಅವರು ಹೊಳೆಯಲ್ಲಿ ಕಾಣಿಸದೇ ಇದ್ದಾಗ ಅಜಿತ್ ಅವರಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಬುಧವಾರ ಬೆಳಗ್ಗೆ ಮತ್ತೆ ಹುಡುಕಾಡಿದಾಗ ಬೆಳಿಗ್ಗೆ 09:45 ಗಂಟೆಗೆ ಅರಾಟೆ ಬ್ರಿಡ್ಜ್‌ ಬಳಿ ನದಿಯಲ್ಲಿ ಚಂದ್ರ ಅವರ ಮೃತದೇಹ ತೇಲುತ್ತಿತ್ತು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.