Home Latest ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿ ಯವರಿಗೆ ಪ್ರಸಾದ್ ರಾಜ್ ಕಾಂಚನ್...

ಕೊಡವೂರು ಮಹಾ ರುದ್ರ ಯಾಗ : ಮಹರ್ಷಿ ಅನಂದ ಗುರೂಜಿ ಯವರಿಗೆ ಪ್ರಸಾದ್ ರಾಜ್ ಕಾಂಚನ್ ಆಹ್ವಾನ

ಬೆಂಗಳೂರು: ಉಡುಪಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲಿ ಶ್ರೀ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗದ ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ಅನಂದ ಸಿದ್ದಿ ಪೀಠದ ಸಂಸ್ಥಾಪಕರು ಮತ್ತು ಶ್ರೀ ಭೂವರಾಹ ಸಾಲಿಗ್ರಾಮ ಕ್ಷೇತ್ರದ ಡಾ.ಶ್ರೀ ಶ್ರೀ ಮಹರ್ಷಿ ಅನಂದ ಗೂರೊಜಿಯವರನ್ನು ,ಮಹಾ ರುದ್ರ ಯಾಗದ ಸೇವಾಕರ್ತರು ,ಮಹಾರುದ್ರ ಯಾಗ ಸಮಿತಿಯ ಕಾರ್ಯಧ್ಯಕ್ಷರು ಆಗಿರುವ ಶ್ರೀ ಪ್ರಸಾದ್ ರಾಜ್ ಕಾಂಚಾನ್ ಅಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.

ಈ ಸಂಧರ್ಭದಲ್ಲಿ ಪ್ರಸಾದ್ ರಾಜ್ ಕಾಂಚನ್ ,ಹಾಗೂ ಪ್ರಧಾನ ಸಂಚಾಲಕರುಗಳಾದ ದ ಶ್ರೀ ಕೃಷ್ಣ ಮೂರ್ತಿ ಅಚಾರ್ಯ ,ತಾರನಾಥ್ ಪೂಜಾರಿ ಯವರನ್ನು ಶ್ರೀಗಳನ್ನು ಶಾಲು ಹಾಕಿ ಸನ್ಮಾನಿಸಿದರು.

ಮೇ15 ಶುಕ್ರವಾರ , ಮಹಾರುದ್ರ ಯಾಗ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಳಲಿದ್ದು ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ.