ಪೊಲೀಸ್ ಯುನಿಫಾರ್ಮ್ ಧರಿಸಿ ಮನೆಗೆ ನುಗ್ಗಿ ರಾಬರಿ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಇಎಲ್ ಬಡಾವಣೆಯಲ್ಲಿರುವ ಹೊಂಬಾಳೆಗೌಡ, ಪತ್ನಿ ಮಂಗಳಮ್ಮ ಮತ್ತು ಮೊಮ್ಮಗ ಇದ್ದರು. ಈ ವೇಳೆ ಪೊಲೀಸ್ ಯೂನಿಫಾರ್ಮ್ ಜೊತೆಗೆ ಕೈಯಲ್ಲಿ ಡೈರಿ ಹಿಡಿದು ಒಬ್ಬ ಎಂಟ್ರಿ ಕೊಟ್ಟರೆ, ಮತ್ತೊಬ್ಬ ಕಳ್ಳ ಕ್ರೈಮ್ ಪಿಸಿ ರೀತಿ ಬ್ಯಾಗ್ ಹಾಕಿಕೊಂಡು ಬಂದಿದ್ದನು.
ತಕ್ಷಣವೇ ಮನೆಗೆ ನುಗ್ಗಿದ ಕಳ್ಳರು ಗನ್ ಮತ್ತು ಚಾಕು ತೋರಿಸಿ ಹೊಂಬಾಳೆ ಗೌಡರನ್ನ ಲಾಕ್ ಮಾಡಿದ್ದಾರೆ. ನಂತರ ಹೊಂಬಾಳೆಗೌಡ ಹಾಗೂ ಮಂಗಳಮ್ಮಗೆ ಟೇಪ್ ಸುತ್ತಿದ್ದಾರೆ.
ಸುಮಾರು 20 ಲಕ್ಷ ಹಣ ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಪರಾರಿಯಾಗುವಾಗ ಹೊಂಬಾಳೆ ಗೌಡ ಹಾಗೂ ಮಂಗಳಮ್ಮ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ.



