Home Crime ಕಡಬ : ಮರದ ಕೊಂಬೆಗೆ ಲುಂಗಿಯನ್ನು ಬಿಗಿದು ವ್ಯಕ್ತಿಯೋರ್ವರು ಆತ್ಮ ಹತ್ಯೆ…!!

ಕಡಬ : ಮರದ ಕೊಂಬೆಗೆ ಲುಂಗಿಯನ್ನು ಬಿಗಿದು ವ್ಯಕ್ತಿಯೋರ್ವರು ಆತ್ಮ ಹತ್ಯೆ…!!

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪ ವ್ಯಕ್ತಿಯೋರ್ವರು ತೋಟದಲ್ಲಿದ್ದ ಕಾಡು ಮರದ ಕೊಂಬೆಗೆ ಲುಂಗಿಯನ್ನು ಬಿಗಿದು ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡವರು ಸತೀಶ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾಧಿದಾರರಾದ ಕಾಂಚನಾ ಪ್ರಾಯ 34 ವರ್ಷ, ಗಂಡ: ಕೇಶವ ದೇವಾಡಿಗ ನಗ್ರಿ ಮನೆ, ಅಲಂಕಾರು ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ಸತೀಶ ಮತ್ತು ದಿನಾಂಕ 11-03-2026 ರಂದು ಬೆಳಿಗ್ಗೆ 07-00 ಗಂಟೆಗೆ ತಂದೆಯವರು ತೋಟಕ್ಕೆ ಹೋಗಿರುತ್ತಾರೆ. ಅವರು 07-45 ಗಂಟೆ ತನಕ ಬಾರದೇ ಇದ್ದುದರಿಂದ ತಾಯಿ ಮತ್ತು ನನ್ನ ಮಗಳು ರಚನಾ, ಮಗ ರಾಕೇಶ್ ಹುಡುಕಿಕೊಂಡು ಹೋಗಿರುತ್ತಾರೆ. ಹುಡುಕಿಕೊಂಡು ಹೋದಾಗ ತಂದೆಯವರು ತೋಟದಲ್ಲಿದ್ದ ಕಾಡು ಮರದ ಕೊಂಬೆಗೆ ಲುಂಗಿಯನ್ನು ಬಿಗಿದು ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ ನಂಬ್ರ 08/2026 ಕಲಂ: 194 BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ.