Home Karavali Karnataka ಕೋಟ : ಕೋಟ ಸಿಎ ಬ್ಯಾಂಕಿನ ಚುನಾವಣೆ : ಉಮಾ ಗಾಣಿಗರ ಸದಸ್ಯತ್ವದಿಂದ ವಜಾ :...

ಕೋಟ : ಕೋಟ ಸಿಎ ಬ್ಯಾಂಕಿನ ಚುನಾವಣೆ : ಉಮಾ ಗಾಣಿಗರ ಸದಸ್ಯತ್ವದಿಂದ ವಜಾ : ಕುಂದಾಪುರ AR ವಿರುದ್ಧ ಬಿಜೆಪಿ ಪ್ರತಿಭಟನೆ…!!

ಕೋಟ: ಜನವರಿ 19/2025 ರಂದು ಕೋಟ ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ ಉಮಾ ಗಾಣಿಗ ಪ್ರತಿಸ್ಪರ್ಧಿ ಪ್ರೇಮ ಬೆಟ್ಲಕ್ಕಿ ಅವರಿಗಿಂತ ಒಂದು ಮತಗಳ ಅಂತರದಿಂದ ಜಯಗಳಿಸಿದ್ದರು. ಸೋತ ಅಭ್ಯರ್ಥಿ ಮರು ಎಣಿಕೆಗೆ ಮನವಿ ಮಾಡಿದ್ದರು. ಆದರೆ ಚುನಾವಣಾ ಅಧಿಕಾರಿ ಮನವಿಯನ್ನು ತಿರಸ್ಕರಿಸಿರುತ್ತಾರೆ.

ಪ್ರೇಮ ಅವರು ಮುಂದೆ AR ಕೋರ್ಟಿನಲ್ಲಿ ದಾವೆ ದಾಖಲಿಸಿರುತ್ತಾರೆ. ಸುಮಾರು 6 ತಿಂಗಳ ವಿಚಾರಣೆ ಬಳಿಕ ಮರು ಎಣಿಕೆಗೆ ಆದೇಶ ಬಂದಿರುತ್ತದೆ.ಆದರೆ ಇದರ ಮದ್ಯೆ ಮರು ಎಣಿಕೆ ಮುಂಚಿತವಾಗಿ ಉಮಾ ಗಾಣಿಗ ಅವರನ್ನು ಸದಸ್ಯತ್ವದಿಂದ ವಜಾ ಗೊಳಿಸಿರುತ್ತಾರೆ.ಈ ಷಡ್ಯಂತರ ವಿರುದ್ದ ಬಿಜೆಪಿ ಜೂ. 27 ರಂದು ಬೆಳಿಗ್ಗೆ ಕುಂದಾಪುರ AR ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೋಟ ಸಿಎ ಬ್ಯಾಂಕ್ ನಿರ್ದೇಶಕ ಅಜಿತ್ ದೇವಾಡಿಗ ಮಾತನಾಡಿ 6 ತಿಂಗಳ ಕಾಲ ಸೇವೆ ಸಲ್ಲಿಸಿದ್ದ ಉಮಾ ಗಾಣಿಗ ಅವರನ್ನ ಕೋಟ ಸಿಎ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತ ಆಡಳಿತದವರು ಒಂದು ಮತ ದಿಂದ ಸೋತ ಪ್ರೇಮ ಅವರಿಗೆ ಸಂಪೂರ್ಣ ಬೆಂಬಲ ನೀಡಿ AR ಕೋರ್ಟ್ ನಲ್ಲಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಅವ್ಯವಹಾರವಾಗಿದೆ, ಮತ ಎಣಿಕೆ ಸರಿಯಾಗಿಲ್ಲ, ಉಮಾ ಗಾಣಿಗ ಅವರು ರಾಜಕೀಯ ಪ್ರೇರಿತವಾಗಿ ಜಯಗಳಿಸಿದ್ದಾರೆ ಎಂದು ಹೇಳಿಕೆ ನೀಡಿರುತ್ತಾರೆ.

ಅವರ ಹೇಳಿಕೆ ಯಂತೆ ಕೋರ್ಟ್ ಮರು ಎಣಿಕೆಗೆ ಕೊಟ್ಟಂತಹ ತೀರ್ಪುನ್ನು ನಾವು ಗೌರವಿಸುತ್ತೇವೆ.ಆದರ ಜೊತೆಯಲ್ಲಿ ಸದಸ್ಯತ್ವ ಸ್ಥಾನವನ್ನು ವಜಾ ಗೊಳಿಸಬೇಕೆಂದು ತೀರ್ಪು ನೀಡುತ್ತಾರೆ. ಇದೊಂದು ರಾಜಕೀಯ ಷಡ್ಯಂತ್ರವಾಗಿದೆ ಆದ್ದರಿಂದ ಉಮಗಾಣಿಗರಿಗೆ ನ್ಯಾಯ ಸಿಗದಿದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಅಜಿತ್ ದೇವಾಡಿಗ ಅವರು ಎಚ್ಚರಿಸಿದರು.

ಈ ಸಂದರ್ಭ ಪ್ರತಿಭಟನೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಸುದೀರ್ ಕೆ., ಸದಾನಂದ ಉಪ್ಪಿನಕುದ್ರು, ರಾಜೇಶ್ ಕಾವೇರಿ, ಶಂಕರ ಅಂಕದ ಕಟ್ಟೆ, ಪ್ರಸಾದ್ ಬಿಲ್ಲವ,
ಕೋಟ ಸಿಎ ಬ್ಯಾಂಕಿನ ನಿರ್ದೇಶಕರಾದ ಅಜಿತ್ ದೇವಾಡಿಗ, ರಂಜಿತ್ ಕುಮಾರ್ ಬಾರಿಕೆರೆ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ, ಕೋಟ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್, ವಿಠ್ಠಲ್ ಪೂಜಾರಿ ಮೊದಲದವರು ಭಾಗಿಯಾಗಿದ್ದರು.