Home Karavali Karnataka ಬೈಂದೂರು : ಸೋಮೇಶ್ವರ ಸಮುದ್ರ ತೀರದಲ್ಲಿ ತೇಲಿ ಬಂದ ಕಲಶ…!!

ಬೈಂದೂರು : ಸೋಮೇಶ್ವರ ಸಮುದ್ರ ತೀರದಲ್ಲಿ ತೇಲಿ ಬಂದ ಕಲಶ…!!

ಬೈಂದೂರು : ಪಡುವರಿ ಗ್ರಾಮದ ಸೋಮೇಶ್ವರ ಸಮುದ್ರ ತೀರದಲ್ಲಿ ದೇವಸ್ಥಾನದ ಗೋಪುರಕ್ಕೆ ಅಳವಡಿಸುವ ಸುಮಾರು 3 ಕೆ.ಜಿ ತೂಕದ ತಾಮ್ರದ ಕಲಶ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕಡಲ ತೆರೆಗೆ ತೀರಕ್ಕೆ ಕಲಶ ತೇಲಿ ಬಂದಿದ್ದು ದೇವಸ್ಥಾನದ ಶಿಖರ ಕಳಶವಾಗಿದೆ ಎಂದು ಹೇಳಲಾಗಿದೆ. ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತ ರಾಮ ಆಚಾರ್, ಸಬ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಎಚ್ ಮತ್ತು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತಾಮ್ರದ ಕಲಶವನ್ನು ಸ್ವಾಧೀನಪಡಿಸಿಕೊಂಡರು.

ಕಳಶದ ವಾಸುದಾರರು ಇದ್ದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.