Home Latest ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ..!

ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ..!

ಉಡುಪಿ : ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ಸಂಸ್ಥೆಯು 2025ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನವನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಸ್ವರಚಿತ ಸ್ವತಂತ್ರ ಕವನ ಸಂಕಲನದ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.

ರವಿರಾಜ್ ಎಚ್. ಪಿ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಅಂಶುಮನೆ , ಬುಡ್ನಾರ್ ರಸ್ತೆ ಕುಂಜಿಬೆಟ್ಟು ಉಡುಪಿ . 9845240309
ಕವನ ಸಂಕಲನಗಳ ಪ್ರತಿಗಳನ್ನು ಕಳುಹಿಸಲು ಕೊನೆಯ ದಿನಾಂಕ ಮೇ 20, 2026 .

ಪ್ರಶಸ್ತಿಯು ರೂಪಾಯಿ 10,000 ಗೌರವ ನಗದಿನೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ .

ಕೃತಿಗಳು ಸ್ವರಚಿತ, ಸ್ವತಂತ್ರ ಕವನ ಸಂಕಲನಗಳಾಗಿರಬೇಕು,
ಅನುವಾದ, ರೂಪಾಂತರ, ಶಿಶುಪ್ರಾಸ, ಹನಿಗವನ ಇತ್ಯಾದಿ ಕೃತಿಗಳನ್ನು ಸ್ಪರ್ಧಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಶಸ್ತಿಯ ಸಂಚಾಲಕರಾದ ಪೂರ್ಣಿಮಾ ಜನಾದ೯ನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.