Home Crime ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತ್ಯು…!!

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತ್ಯು…!!

ಶಂಕರನಾರಾಯಣ: ಹಿಲಿಯಾಣ ಗ್ರಾಮದ ಚೋರಾಡಿ ಕಲ್ಲುಗದ್ದೆಯಲ್ಲಿ ವಿಪರೀತ ಗಾಳಿ-ಮಳೆಯ ಸಂದರ್ಭ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರು ಗಣೇಶ ಎಂದು ತಿಳಿದು ಬಂದಿದೆ.ಇವರು ಬೆಂಗಳೂರಿನ ಎಸ್‌ಎಲ್‌ವಿ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಸುಶ್ಮಿತಾ ಅವರೊಂದಿಗೆ ದೈವದ ಕೆಲಸದ ನಿಮಿತ್ತ ಮೇ 18ರಂದು ಊರಿಗೆ ಬಂದಿದ್ದರು.

ಜೂನ್ 7ರಂದು ಸಂಜೆ ಭಾರೀ ಗಾಳಿ-ಮಳೆ ಆರಂಭವಾಗಿದ್ದು, ಮನೆಯ ಕೊಟ್ಟಿಗೆಯಲ್ಲಿದ್ದ ವಿದ್ಯುತ್ ತಂತಿ ಕೆಳಗೆ ಜೋತು ಬಿದ್ದಿತ್ತು. ಇದನ್ನು ಗಮನಿಸಿದ ಗಣೇಶ ಅವರು ತಂತಿಯನ್ನು ಮೇಲಕ್ಕೆ ಕಟ್ಟಲು ಮುಂದಾದಾಗ, ಹಳೆಯದಾಗಿದ್ದ ವಿದ್ಯುತ್ ತಂತಿ ತುಂಡಾಗಿ ಅವರ ಎದೆ ಭಾಗಕ್ಕೆ ತಗುಲಿ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ಕುಟುಂಬದವರು ಹಾಗೂ ಸಂಬಂಧಿಕರು ಅವರನ್ನು ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಪರೀಕ್ಷಿಸಿ ಗಣೇಶ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.