ಬೈಂದೂರು: ಕಡುಬಡತನ 7 ನೇ ತರಗತಿ ವರೆಗೆ ಓದಿರುವ ಹುಡುಗ ಸಣ್ಣವನಿರುವಾಗಲೇ ತಂದೆ ಕಳೆದು ಕೊಂಡ ನಂತರ ಬುದ್ದಿ ವಿಕಲ್ಪ ಗೊಂಡ ಸುಮಾರು 15 ವರ್ಷ ದ ಬಾಲಕ ದಾರಿ ತಪ್ಪಿ ದಾವಣಗೆರೆ ನಗರದಿಂದ ಮನೆ ಬಿಟ್ಟು ಉಡುಪಿ ಜಿಲ್ಲೆ ಗೆ ಬಂದಿದ್ದಾನೆ ಎಂಬುದು ತನಿಖೆ ಯಿಂದ ತಿಳಿದಿದೆ ,
ಹೌದು ಊರು ಅಲೆಯುದೇ ಆತನ ಕಾರ್ಯ. ಮೊದಲು ಪೈಂಟಿಂಗ್ ಸಣ್ಣ ಪುಟ್ಟ ಕೆಲಸ ಮಾಡಿದ.ನಂತ್ರ ಯಾಕೋ ಬುದ್ದಿ ವಿಕಲ್ಪ ಗೊಂಡ ಬಾಲಕ ಶಂಕರ್ ಯಾನೆ ಪ್ರಸಾದ್ ಎಂಬುವರು ಊರೂರು ಸುತ್ತಿ ನಿನ್ನೆಯ ದಿನ ನಾಡ ಗ್ರಾಮದ ಬಳಿಯಲ್ಲಿ ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡಿದ್ದಾನೆ ತಕ್ಷಣ ಸಾರ್ವಜನಿಕರು ಕೂಡಲೇ 112 ಗೆ ಕರೆ ಮಾಡಿ ದೂರು ನೀಡಿದರು.
ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗಂಗೊಳ್ಳಿ ಠಾಣೆ ಗೆ ಕರೆತಂದು ಬಾಲಕನನ್ನು ಹಾರೈಕೆ ಮಾಡಿ ನಂತರ
ನಮ್ಮ ಭೂಮಿ ಸಂಸ್ಥೆ ಗೆ ಒಂದು ದಿನ ಅಲ್ಲಿ ವಾಸ್ತವ್ಯ ಉಳಿಸಿ
ಅಲ್ಲಿಂದ ಮರುದಿನ ಮಕ್ಕಳ ಕಲ್ಯಾಣ ಸಮಿತಿ ಯವರಿಗೆ ನೀಡಲಾಯಿತು 15 ವರ್ಷದ ಪ್ರಾಯದ ಬಾಲಕನನ್ನು ಬಾಲ ಮಂದಿರಕ್ಕೆ ಒಪ್ಪಿಸಲಾಯಿತು
ಗಂಗೊಳ್ಳಿ ಪೊಲೀಸರು ಬಾಲಕನ ವಿಳಾಸ ಪತ್ತೆ ಮಾಡಲು ಸಾಕಷ್ಟು ಶ್ರಮವಹಿಸಿ ನಂತರ ದಾವಣಗೆರೆ ಮೂಲದವನು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರಿಗೆ ಫೋನ್ ಕರೆ ಮೂಲಕ ಸಂಪರ್ಕಿಸಿ ಗಾಂಧಿನಗರ ಪೋಲಿಸ್ ಸಿಬ್ಬಂದಿ ರಮೇಶ್ ನಾಯ್ಕ್ ರವರು ಆ ಭಾಗದಲ್ಲಿ ಬಾಲಕನ ಭಾವಚಿತ್ರ ವಾಟ್ಸಪ್ ಮೂಲಕ ಬಾಲಕನ ಭಾವಚಿತ್ರ ಹಾಕಿ ನಂತರದಲ್ಲಿ ದಾವಣಗೆರೆ ಪೊಲೀಸರ ಕಾರ್ಯಚರಣೆಯಿಂದ ಬಾಲಕನ ವಿಳಾಸ ಪತ್ತೆ ಮಾಡಲಾಯಿತು,
ಈ ಕಾರ್ಯದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ರಾಘವೇಂದ್ರ ಪಿ. ಶಾಂತರಾಮ್ ಶೆಟ್ಟಿ ಚಂದ್ರ , ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಹಾಗೂ ನಾಗರಾಜ್ ರವರ ಸತತ ಕರ್ತವ್ಯದ ಜೊತೆಗೆ ಪರಿಶ್ರಮದಿಂದ ಚುರುಕಿನಿಂದ ಶೀಘ್ರದಲ್ಲಿ ಪತ್ತೆ ಹಚ್ಚಲು ಯಶಸ್ವಿಯಾದರು ,
ಈ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರು ಹಾಗೂ ಸದ್ಯಸರು ಸೇರಿದಂತೆ ಅಧಿಕಾರಿಗಳ ಸಹಕಾರದಿಂದ ಬಾಲಕನನ್ನು ಮರಳಿ ದಾವಣಗೆರೆಗೆ ತಲುಪಿಸಲು ಸಾಧ್ಯವಾಗಿದೆ
ಕೊನೆಗೂ ವಿಳಾಸ ಪತ್ತೆ ಹಚ್ಚುವ ಮೂಲಕ ದಾರಿ ತಪ್ಪಿದ ಬುದ್ದಿ ಮಾಂದ್ಯ ಬಾಲಕನಿಗೆ ವಿಳಾಸ ಕಂಡು ಹಿಡಿದು ಅಲ್ಲದೇ ಪಾಲಕರನ್ನು ಉಡುಪಿಗೆ ಕರೆಸಿ ಪೋಷಕರ ವಶಕ್ಕೆ ಬಿಡಲಾಯಿತು ಪೊಲೀಸರ ಸಕಾಲೀಕ ಪ್ರಯತ್ನ ದಿಂದ ಸಿಕ್ಕಿದ 12 ಗಂಟೆ ಒಳಗೆ ಪೋಷಕ ಮಡಿಲಿಗೆ ತರುವ ನಿರಂತರ ಪ್ರಯತ್ನ ಹಾಗೂ ಕರ್ತವ್ಯ ನಿಷ್ಠೆ ಮಾನವೀಯತೆಗೆ ಹಿಡಿದ ಕೈ ಕನ್ನಡಿ ಎಂಬಂತಾಗಿದೆ ಪೊಲೀಸರ ಕರ್ತವ್ಯ ನಿಷ್ಠೆ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.



