Home Crime ಅಕ್ರಮ ಕೆಂಪು ಕಲ್ಲು ಸಾಗಾಟ : ಟಪ್ಪರ್ ವಶಕ್ಕೆ…!!

ಅಕ್ರಮ ಕೆಂಪು ಕಲ್ಲು ಸಾಗಾಟ : ಟಪ್ಪರ್ ವಶಕ್ಕೆ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮಿನಿ ಟಪ್ಪರ್ ವಾಹನದಲ್ಲಿ ಅಕ್ರಮವಾಗಿ ಕೆಂಪು ಕಲ್ಲನ್ನು ಸಾಗಾಟ ನಡೆಸುತ್ತಿರುವಾಗ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಟಿಪ್ಪರ್ ಚಾಲಕ ಶ್ರೀನಾಥ್ ಎಂದು ತಿಳಿದು ಬಂದಿದೆ.

ಟಿಪ್ಪರ್ ಮಾಲಿಕ ನಾಗು ಎಂದು ತಿಳಿಯಲಾಗಿದೆ.

ಕುಂದಾಪುರ ಗ್ರಾಮಾಂತರ ಪೊಲೀಸರು ಟಿಪ್ಪರ್ ಸಹಿತ 200 ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಾರಾಂಶ : ದಿನಾಂಕ 22/06/2025 ರಂದು ಸಂಜೆ ಭೀಮಾಶಂಕರ ಸಿನ್ನೂರ, ಪೊಲೀಸ್‌ ಉಪನಿರೀಕ್ಷಕರು (ಎಲ್&ಓ), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಅಂಪಾರು ಕಡೆಯಿಂದ ಕಂಡ್ಲೂರು ಕಡೆಗೆ ಕೆಂಪು ಕಲ್ಲನ್ನು ಕಳ್ಳತನ ಮಾಡಿ ಅಕ್ರಮವಾಗಿ ಮಿನಿ ಟಿಪ್ಪರ್‌ ವಾಹನ ನಂಬ್ರ KA-20-B-7633 ನೇಯದರಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ದೂಪದಕಟ್ಟೆ ಜಂಕ್ಷನ್‌ ಬಳಿ ವಾಹನ ತಪಾಸಣೆ ನಡೆಸುತ್ತಿರುವಾಗ ಅಂಪಾರು ಕಡೆಯಿಂದ ಬಂದ ಮಿನಿ ಟಿಪ್ಪರ್ ವಾಹನವನ್ನು ಪರಿಶೀಲಿಸಿದಾಗ KA-20-B-7633 ನೇ ನಂಬ್ರದ ಮಿನಿ ಟಿಪ್ಪರ್ ವಾಹನದ ಹಿಂಬದಿಯ ಬಾಡಿಯಲ್ಲಿ ಕೆಂಪು ಕಲ್ಲು ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೇ 200 ಕೆಂಪು ಕಲ್ಲುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಚಾಲಕನ ಬಳಿ ಹೆಸರು ವಿಚಾರಿಸಲಾಗಿ ಶ್ರೀನಾಥ (37) ಎಂದು ತಿಳಿಸಿದ್ದು ನಂತರ ವಾಹನದ ನೊಂದಣಿ ಮಾಲಿಕ ಯಾರು ಮತ್ತು ಕೆಂಪುಕಲ್ಲು ಎಲ್ಲಿಂದ ತುಂಬಿಕೊಂಡು ಬಂದಿರುವುದಾಗಿ ವಿಚಾರಿಸಿದಾಗ ನಾಗು ಎಂಬುವವರು ಟಿಪ್ಪರ್ ಮಾಲಕರಾಗಿದ್ದು, ಕಲ್ಲನ್ನು ಹೊಸಂಗಡಿಯ ಎಡಮೊಗ್ಗೆ ಎಂಬಲ್ಲಿಂದ ತುಂಬಿಕೊಂಡು ಬಂದಿರುವುದಾಗಿ ತಿಳಿಸಿದಂತೆ ಕೆಂಪು ಕಲ್ಲುಗಳ ಸಾಗಾಟಕ್ಕೆ ಬಳಸಿದ ಮಿನಿ ಟಿಪ್ಪರ್‌ ವಾಹನ ನಂಬ್ರ KA20-B- 7633 ನೇಯದನ್ನು ಮತ್ತು ಕೆಂಪುಕಲ್ಲು ತುಂಬಿಕೊಂಡು ಬಂದ ಸ್ಥಳದಲ್ಲಿದ್ದ ಕಲ್ಲು ಕತ್ತರಿಸುವ ಮೆಷಿನ್‌ , ಕೆಂಪು ಕಲ್ಲು ಕೀಳುವ ಮೆಷಿನ್ ಹಾಗೂ ಕೆಂಪುಕಲ್ಲು ಕಡಿಯುವ ಸ್ಥಳದಲ್ಲಿ ಬಳಸಿದ JCB ವಾಹನ ನಂಬ್ರ KA-20-D-553 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2025 ಕಲಂ: 303 (2), 112 BNS R/W 4, 4(1)(a),21 MMDR Act ರಂತೆ ಪ್ರಕರಣ ದಾಖಲಾಗಿರುತ್ತದೆ.