Home Latest ಮಂಗಳೂರು: ಯುವತಿ ನಾಪತ್ತೆ : ದೂರು ದಾಖಲು

ಮಂಗಳೂರು: ಯುವತಿ ನಾಪತ್ತೆ : ದೂರು ದಾಖಲು

ಮಂಗಳೂರು: ನರಿಂಗಾನ ಗ್ರಾಮದ ಯುವತಿಯೊಬ್ಬಳು ತನ್ನ ಮನೆಯಿಂದ ಸೋಮವಾರ ಬೆಳಗಿನ ಜಾವದಿಂದ ನಾಪತ್ತೆಯಾಗಿದ್ದು, ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.

 

ನಾಪತ್ತೆಯಾದ ಯುವತಿ ಇಬ್ರಾಹಿಂ ಎಂ ಅವರ ಮಗಳು ರಾಭಿಯತುಲ್ ಅಧಭಿಯ(19) ಎಂದು ತಿಳಿದು ಬಂದಿದೆ.

 

ಇವರು ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಳು. 4.6 ಅಡಿ ಎತ್ತರವಿದ್ದು, ಕೊನೆಯ ಬಾರಿಗೆ ನೋಡಿದಾಗ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ್ದಳು ಎಂದು ಹೇಳಲಾಗಿದೆ.

 

ಆಕೆಯ ತಂದೆ ನೀಡಿದ ದೂರಿನ ಪ್ರಕಾರ, ಮೇ 3 ರ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಊಟದ ನಂತರ ಮಲಗಲು ಹೋಗಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಸೋಮವಾರ ಬೆಳಗಿನ ಜಾವ 2:30 ಕ್ಕೆ ಇಬ್ರಾಹಿಂ ಮಂಗಳೂರು ಡಾಕ್‌ಗೆ ಕೆಲಸಕ್ಕೆ ಹೋಗಲು ಎದ್ದಾಗ, ತನ್ನ ಮಗಳು ತನ್ನ ಕೋಣೆಯಲ್ಲಿ ಇಲ್ಲದಿರುವುದು ಮತ್ತು ಅಡುಗೆಮನೆಯ ಹಿಂಬಾಗಿಲು ತೆರೆದಿರುವುದು ಕಂಡುಬಂದಿದೆ. ಸ್ಥಳೀಯ ಎಲ್ಲಾ ಪ್ರದೇಶಗಳನ್ನು ಹುಡುಕಿದರೂ ಮತ್ತು ಸಂಬಂಧಿಕರೊಂದಿಗೆ ವಿಚಾರಿಸಿದರೂ ತಿಳಿದು ಬಂದಿಲ್ಲ.

 

ಈ ಕುರಿತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವತಿಯ ಕುರಿತು ಮಾಹಿತಿ ಇದ್ದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿಯನ್ನು 0824-2220800 ಅಥವಾ ಕೊಣಾಜೆ ಪೊಲೀಸ್‌ ಠಾಣೆಯನ್ನು 0824-2220536 ಅಥವಾ 9480802350 ಗೆ ಸಂಪರ್ಕಿಸಲು ಕೋರಲಾಗಿದೆ.