ಮೂಡುಬಿದಿರೆ : ಮೂಡುಬಿದಿರೆ ಹಾಗೂ ಸುತ್ತಮುತ್ತಲ ಪ್ರದೇಶಗಳ ವಾಟ್ಸಾಪ್ ಗುಂಪುಗಳಲ್ಲಿ “ಡಿ-ಮಾರ್ಟ್ ರೆಡಿ – ಮೆಗಾ ಗಿಫ್ಟ್” ಎಂಬ ಶೀರ್ಷಿಕೆಯ ಸಂದೇಶವೊಂದು ವೇಗವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ.
ವಾಟ್ಸಾಪ್ ಮೂಲಕ ಬರುತ್ತಿರುವ ಈ ಸಂದೇಶದಲ್ಲಿ “ಡಿ-ಮಾರ್ಟ್ ಎಲ್ಲರಿಗೂ ವಿಶೇಷ ಉಡುಗೊರೆಗಳನ್ನು ನೀಡುತ್ತಿದೆ” ಎಂದು ಹೇಳಿ, ಒಂದು ಅನುಮಾನಾಸ್ಪದ ಲಿಂಕ್ ನೀಡಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದ ಬಳಿಕ ಬಳಕೆದಾರರಿಂದ ವೈಯಕ್ತಿಕ ಮಾಹಿತಿ, ಫೋನ್ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ಕೇಳಲಾಗುತ್ತದೆ. ಇದರಿಂದ ಬ್ಯಾಂಕ್ ಖಾತೆ ಮತ್ತು ಇತರ ಡಿಜಿಟಲ್ ಮಾಹಿತಿಗಳು ದುರುಪಯೋಗವಾಗುವ ಸಾಧ್ಯತೆ ಇದೆ.
ಪರಿಶೀಲನೆ ವೇಳೆ ಸಂದೇಶದಲ್ಲಿರುವ ಲಿಂಕ್ dmalrfi.cyou ಎಂಬ ಅಸಂಬದ್ಧ ವಿಳಾಸ ಹೊಂದಿರುವುದು ಗಮನಕ್ಕೆ ಬಂದಿದೆ. ಆದರೆ ಡಿ-ಮಾರ್ಟ್‌ನ ಅಧಿಕೃತ ವೆಬ್‌ಸೈಟ್‌ಗಳು dmartindia.com ಅಥವಾ dmartin ಮಾತ್ರವಾಗಿವೆ. ಇಂತಹ ಅಸಾಧಾರಣ ಅಕ್ಷರಗಳಿರುವ ಲಿಂಕ್‌ಗಳು ಸಾಮಾನ್ಯವಾಗಿ ವಂಚನೆಗೆ ಬಳಸಲ್ಪಡುವುದಾಗಿ ತಜ್ಞರು ಎಚ್ಚರಿಸಿದ್ದಾರೆ.



